ಚಲಿಸುತ್ತಿದ್ದ ಲಾರಿ ಟಾಯರ್ ಸ್ಪೋಟ, ವಾಹನಕ್ಕೆ ಬೆಂಕಿ

ಚಲಿಸುತ್ತಿದ್ದ ಲಾರಿ ಟಾಯರ್ ಸ್ಪೋಟಗೊಂಡು ವಾಹನ ಹೊತ್ತಿ ಉರಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಗುಡಿ ಬಳಿ ನಡೆದಿದೆ. ಹೊಸಪೇಟೆ-ಗದಗ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಘಟನೆ ಇದಾಗಿದೆ. ಟಾಯರ್ ಸ್ಪೋಟದಿಂದ ಏಕಾಏಕಿ ಲಾರಿಗೆ ಬೆಂಕಿ ಹತ್ತಿಕೊಂಡಿದೆ. ಕೊಪ್ಪಳನಿಂದ ಗದಗ ಬರುತ್ತಿದ್ದ ಸಿಮೆಂಟ್ ಲಾರಿ ಟಾಯರ್ ಸ್ಪೋಟದಿಂದ ಬೆಂಕಿ ಅವಘಡ ಸಂಭವಿಸಿದೆ. ಕೋಡಲೇ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆಸಿದ್ರು. ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.