ವಿಐಎಸ್‌ ಎಲ್‌ ಪುನಶ್ಚೇತನಕ್ಕೆ ಆಗ್ರಹಿಸಿ ಇಂದು ಭದ್ರಾವತಿ ಟೌನ್‌ ಬಂದ್‌

ವಿಐಎಸ್‌ ಎಲ್‌ ಪುನಶ್ಚೇತನಕ್ಕೆ ಆಗ್ರಹಿಸಿ ಇಂದು ಭದ್ರಾವತಿ ಟೌನ್‌ ಬಂದ್‌

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ವಿಐಎಸ್‌ ಎಲ್‌ ಕಾರ್ಖಾನೆ ಮುಚ್ಚಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕೇಂದ್ರ ಸರ್ಕಾರ ನಿರ್ಧಾರ ಖಂಡಿಸಿ ಭದ್ರಾವತಿ ಸ್ವಯಂ ಪ್ರೇರಿತ ಬಂದ್‌ ಮಾಡಿದ್ದಾರೆ.

ವಿವಿಧ ಕಾರ್ಮಿಕ ಸಂಘಟನೆಗಳು, ಪ್ರಗತಿ ಪರ ಸಂಘಟನೆಗಳಿಂದ ಭದ್ರಾವತಿ ಸ್ವಯಂ ಪ್ರೇರಿತ ಬಂದ್‌ ಮಾಡಿದ್ದಾರೆ.

ಯಾವುದೇ ಕಾರಣಕ್ಕೂ ವಿಐಎಸ್‌ ಎಲ್‌ ಕಾರ್ಖಾನೆ ಮುಚ್ಚಲು ಬಿಡುವುದಿಲ್ಲ ಎಂದು ಒತ್ತಾಯಿಸಿದ್ದಾರೆ. ವಿಐಎಸ್‌ ಎಲ್‌ ಪುನಶ್ಚೇತನಕ್ಕೆ ಆಗ್ರಹಿಸಿ ಭದ್ರಾವತಿ ಟೌನ್‌ ಬಂದ್‌ ಆಗಿದೆ.

ಕಳೆದ 37 ದಿನಗಳಿಂದ ವಿಐಎಸ್‌ ಎಲ್‌ ಕಾರ್ಖಾನೆ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ವಿಐಎಸ್‌ ಎಲ್‌ ಮುಂಭಾಗದಿಂದ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ ನಡೆದಿದೆ. ಡಾ. ಅಂಬೇಡ್ಕರ್‌ ವೃತ್ತ, ಬಿ.ಹೆಚ್‌ ರಸ್ತೆ, ಚನ್ನಗರಿ ರಸ್ತೆ ಮೂಲಕ ಜಾಥಾ ನಡೆಸಿದ್ದಾರೆ. ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿ ತಹಸೀಲ್ದಾರ್‌ ಗೆ ಮನವಿ ಸಲ್ಲಿಕೆ ಮಾಡಲಾಗಿದೆ.

ಕಾರ್ಖಾನೆ ಉಳಿದ್ರೆ ಮಾತ್ರ ಭದ್ರಾವತಿ ಉಳಿದಂತೆ, ಈ ಹಿನ್ನೆಲೆಯಲ್ಲಿ ವರ್ಕತರು , ವ್ಯಾಪಾರಸ್ಥರು ತಮ್ಮ ವ್ಯವಹಾರದ, ವಹಿವಾಟುಗಳನ್ನು ಸ್ಥಗಿತಗೊಳಿಸುವ ಮೂಲಕ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.