ಉಚಿತ ನೇತ್ರ ತಪಾಸಣೆ ಶಿಭಿರ-- ಸದುಪಯೋಗ ಪಡೆದುಕೊಳ್ಳಲು ನವೀನಕುಮಾರ ಮನವಿ
ಕಣ್ಣಿಲ್ಲದಿದ್ದರೆ ಇಡೀ ಜಗತ್ತೆ ಅಂಧಕಾರಮಯ. ,ಜೀವನ ನಿರ್ವಹಣೆ ಹೇಳತೀರದು,. ಅದರಲ್ಲೂ ವೃದ್ಧಾಪ್ಯದಲ್ಲಿ ಕಣ್ಣು ಕಾಣದಿದ್ದರೆ ಇನ್ನೂ ಕಷ್ಟ. ಇಂತಹ ಸಮಸ್ಯೆಗಳನ್ನು ನಿವಾರಿಸಲು ಶಂಕರ್ ಕಣ್ಣಿನ ಆಸ್ಪತ್ರೆ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಹಮ್ಮಿಕೊಂಡಿದೆ. ಇದರ ಸದುಪಯೋಗವನ್ನು ಪಲಾನುಭವಿಗಳು ಪಡೆದುಕೊಳ್ಳುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳಾದ ಹೆಚ್.ಡಿ. ನವೀನ ಕುಮಾರ್ ಹೇಳಿದರು.ಬುಧವಾರ ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು, ಸಮುದಾಯ ಆರೋಗ್ಯ ಕೇಂದ್ರ ಕೊಟ್ಟೂರು ಆವರಣದಲ್ಲಿ, ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕೊಟ್ಟೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ" " ಉಚಿತ ನೇತ್ರ ತಪಾಸಣೆ & ಚಿಕಿತ್ಸಾ ಶಿಬಿರ""ವನ್ನು ಉದ್ಘಾಟಿಸಿ ಮಾತನಾಡಿದರು. ಈ ಉಚಿತ ನೇತ್ರಾ ಶಿಭಿರದಲ್ಲಿ ಸುಮಾರು 270 ಕ್ಕೂ ಹೆಚ್ಚು ಜನರು ನೊಂದಾಯಿತರಾಗಿದ್ದು ಇದರಲ್ಲಿ ಅತ್ಯಂತ ಸಮಸ್ಯೆಯುಳ್ಳವರನ್ನ ಆಯ್ಕೆ ಮಾಡಿಕೊಂಡು ಚಿಕಿತ್ಸೆ ಮಾಡಲಾಗುವುದು ಎಂದು ಶಂಕರ ಕಣ್ಣಿನ ಆಸ್ಪತ್ರೆ ಸಂಚಾಲಕರಾದ ಅರುಣ್ ಹೇಳಿದರು .ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿಗಳಾದ ಬದ್ಯಾನಾಯ್ಕ್, ಪಟ್ಟಣ ಪಂಚಾಯತಿ ಸದಸ್ಯೆ ವೀಣಾ ವಿವೇಕಾನಂದ,ಯೋಗೀಶ್ವರ್ ದಿನ್ನೆ- ಜನನಿ ಫೌಂಡೇಶನ್ ಸಂಚಾಲಕರು ಕೊಟ್ಟೂರು, ನಾರಾಯಣಮೂರ್ತಿ ನೇತ್ರಾಧಿಕಾರಿಗಳು ಹಾಗೂ ಅಮ್ಮ ಕ್ರಿಯೇಷನ್ ಪ್ರಕಾಶ್,ಪಲಾನುಭವಿಗಳು ಇದ್ದರು.