ಸಚಿವರ ತಲೆ ಏರಿದ ವಾನರರು.-ಹತ್ತಾರು ವಾನರರಿಂದಿಗೆ ಕಾಲ ಕಳೆದ ಸಚಿವ ಬಿ ಶ್ರೀರಾಮುಲು

ಸಾರಿಗೆ ಸಚಿವ ಶ್ರೀರಾಮುಲು ತಲೆಯ ಮೇಲೆ ಹತ್ತಾರು ಮಂಗಗಳು ಹತ್ತಿ ಕುಳಿತ ಪ್ರಸಂಗ ಕೊಪ್ಪಳ ಜಿಲ್ಲೆಯ ಕಿಷ್ಕಿಂದ ಬಳಿ ಕಂಡು ಬಂದಿತು. ಸಚಿವ ಶ್ರೀರಾಮುಲು ಪಂಪಾ ಸರೋವರಕ್ಕೆ ಆಗಮಿಸಿದ್ದಾಗ ಈ ಘಟನೆ ನಡೆದಿದ್ದು ಈ ದೃಶ್ಯ ಭಾರಿ ವೈರಲ್ ಆಗುದೆ.ಕಿಷ್ಕಿಂದಾ ಪ್ರದೇಶದ ಪಂಪಾ ಸರೋವರ್ ಬಳಿಯ ಶ್ರೀಮಹಾಲಕ್ಷ್ಮಿ ದೇವಸ್ಥಾನಕ್ಕೆ ಸಚಿವರು ಭೇಟಿ ನೀಡಿದ್ದರು.ಈ ವೇಳೆ ಮಂಗಗಳು ಶ್ರೀರಾಮುಲು ಸುತ್ತಲು ನೆರೆದವು.ಆಗ ರಾಮುಲು ವಾನರಗಳಿಗೆ ತಿನ್ನಲು ಬಾಳೆ ಹಣ್ಣು ನೀಡಿದರು. ವಾನರಗಳೊಂದಿಗೆ ಕೆಲ ಸಮಯ ಕಾಲ ಕಳೆದರು. ಈ ವೇಳೆ ಮಾತನಾಡಿದ ಅವರು ಇದು ನನ್ನ ಜೀವನದ ಅವಿಸ್ಮರಣಿಯ ಘಟನೆ ಎಂದರು. ಶ್ರೀರಾಮುಲು ತಲೆಯ ಮೇಲೆ ವಾನರ ಕುಳಿತ ಫೋಟೊ ಫುಲ್ ವೈರಲ್ ಆಗಿದೆ.