ವಿನಯ ಬಿಡುಗಡೆ ಕಾರ್ಯಕರ್ತರಲ್ಲಿ ಸಂತಸ
ಮಾಜಿ ಸಚಿವ ವಿನಯ ಕುಲಕರ್ಣಿ ಬಿಡುಗಡೆ ಹಿನ್ನೆಲೆಯಲ್ಲಿ ಕೈ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಇಂದು ಬೆಳ್ಳಗೆ ಬೆಳಗಾವಿ ಹಿಂಡಲಾಗ ಜೈಲಿನಿಂದ ವಿನಯ ಕುಲಕರ್ಣಿ ಬಿಡುಗಡೆ ಆಗ್ತಿರು ಬೆನ್ನಲ್ಲೇ ಜಿಲ್ಲೆಯ ವಿನಯ ಅಭಿಮಾನಿಗಳು ನೆಚ್ಚಿನ ನಾಯಕನನ್ನು ಬರಮಾಡಿಕೊಳ್ಳಲು ತಂಡೊಪ್ಪತಂಡವಾಗಿ ಸಾವಿರಾರು ಸಂಖ್ಯೆಯಲ್ಲಿ ವಾಹನಗಳ ಮೂಲಕ ಧಾರವಾಡದಿಂದ ತೆರಳಿದ್ದಾರೆ. ಕಳೆದ 9,ತಿಂಗಳ ಕಾಲ ಜಿಲ್ಲಾ ಪಂಚಾಯತ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಜೈಲುವಾಶ ಅನುಭವಿಸುತ್ತಿದ್ದರು. ವಿನಯ ಕುಲಕರ್ಣಿ ಅವರನ್ನು ಶತಾಯ ಗತಾಯ ಕುಟುಂಬಸ್ಥರು, ಜಿಲ್ಲಾ ನ್ಯಾಯಾಲಯ, ಹೈಕೋರ್ಟ್ ನಲ್ಲಿ ಜಾಮಿನಿಗಾಗಿ ಹರಸಹಾಸ ಪಟ್ಟಿದ್ದರು. ಜಾಮಿನುಗಾಗಿ ಪರದಾಟ ನಡೆಸಿದ್ದ, ವಿನಯ ಕುಲಕರ್ಣಿಗೆ ಸುಪ್ರೀಂ ಕೋಟ್೯ ಷರತ್ತು ಬದ್ಧ ಜಾಮಿನು ನೀಡಿದ್ದು, ಕಾಂಗ್ರೆಸ್ ಪಾಳೆದಲ್ಲೆ ಸಂತಸ ತಂದಿದೆ. ಹಿಂಡಲಾಗ ಜೈಲು ಮುಂದೆ ಸರಿತಿ ಸಾಲಿನಲ್ಲಿ ನಿಂತು ವಿನಯ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ವಿನಯ ಕುಲಕರ್ಣಿಗೆ ಹಾರ ಸಿಹಿ ಕೈಯಲ್ಲಿ ಹಿಡಿದು ನಿಂತಿರುವ ದೃಶ್ಯ ಕಂಡುಬಂದವು