ಕೋಳಿಗೂ ಅರ್ಧ ಟಿಕೆಟ್ ನೀಡಿದ ಕೆ.ಎಸ್.ಆರ್.ಟಿ.ಸಿ.ಬಸ್ ನಿರ್ವಾಹಕ | Koppal | KSRTC Bus |

ಕೆ.ಎಸ್.ಆರ್.ಟಿ.ಸಿ.ಬಸ್‍ನಲ್ಲಿ ವ್ಯಕ್ತಿಯೋರ್ವ ಹೈದ್ರಾಬಾದ್ ನಿಂದ ಗಂಗಾವತಿಗೆ ಬರುವ ವೇಳೆ ಸಾಕಿದ ಕೋಳಿಗೂ 463 ರೂಪಾಯಿ ಟಿಕೆಟ್ ನೀಡಿ ಕೋಳಿ ಬಸ್ ನಲ್ಲಿ ತಗೆದಕೊಂಡು ಬಂದಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಸರ್ಕಾರಿ ಬಸ್‍ಗಳಲ್ಲಿ ಸಾಕು ಪ್ರಾಣಿಗಳಿಗೆ ಟಿಕೆಟ್ ಖರಿದಿಸಬೇಕಾದ ನಿಯಮವಿದೆ, ಹೀಗಾಗಿ ನವೆಂಬರ್ 28 ರಂದು ಹೈದ್ರಾಬಾದ್ ನಿಂದ ಪ್ರಯಾಣ ಮಾಡಿದ ವ್ಯಕ್ತಿ ತಂದಿದ್ದ ಕೋಳಿಗೂ ನಿರ್ವಾಹಕರು ಅರ್ಧ ಟಿಕೆಟ್ ನೀಡಿದ್ದಾರೆ. ಒಂದು ಕೋಳಿಗೂ ಅರ್ಧ ಟಿಕೆಟ್ ನೀಡಿರೋದು ಇದೀಗ ಪರ ವಿರೋಧ ಚರ್ಚೆಯಾಗಿದೆ.