ಅಕ್ರಮ ಗೋ ಹತ್ಯೆ ಮಾಡವರ ಮೇಲೆ ಪ್ರತಿ ಜಿಲ್ಲೆಯಲ್ಲಿ ಎಪ್ ಐ ಆರ್
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆಯಿದ್ದರೂ ನೆರೆಯ ಗೊವಾ ರಾಜ್ಯಕ್ಕೆ ಕರ್ನಾಟಕ ದಿಂದ ಪ್ರತಿ ನಿತ್ಯ ಗೊಮಾಂಸ ಸಾಗಾಟ ನಡೆಯುತ್ತಿದೆ. ಈ ಕುರಿತು ಪಷುಸಂಗೊಪನೆ ಸಚಿವ ಪ್ರಭುಚೌಹಾಣ ಅವರನ್ನು ಮಾತನಾಡಿಸಿದಾಗ ನಮ್ಮ ಸರ್ಕಾರ ಬಂದ ಮೇಲೆ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದೇವೆ. ಕೆಲವರು ಹೈ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಶೀಘ್ರವೇ ತಮ್ಮ ಪರವಾಗಿ ತೀರ್ಪು ಬರಲಿದೆ. ಅಕ್ರಮ ಗೋ ಹತ್ಯೆ ಮಾಡವರ ಮೇಲೆ ಪ್ರತಿ ಜಿಲ್ಲೆಯಲ್ಲಿ ಎಪ್ ಐ ಆರ್ ಆಗಿದೆ. ಕೋರ್ಟಿನ ತೀರ್ಪು ಬಂದಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಭು ಚವ್ಹಾಣ ತಿಳಿಸಿದರು.