ವಿವಿಧ ಬೇಡಿಕೆ ಇಟ್ಟು ಅಂಗನವಾಡಿವರು ಪ್ರತಿಭಟನೆ
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ, ಸಹಾಯಕಿರ ಫೆಡರೇಶನ ವತಿಯಿಂದ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ್ರು. ನಗರದ ಜಿಲ್ಲಾಧಿಕಾರಿ ಎದುರು ಜಮಾಯಿಸಿದ ಅಂಗನವಾಡಿ ಕಾರ್ಯಕರ್ತೆಯರು ಬೇಡಿಕೆ ಈಡೇರಿಸದ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೋಗಿ ಆಕ್ರೋಶ ಹೊರಹಾಕಿದ್ರು. ಇನ್ನಮುಂದೇ ಸರ್ಕಾರ ಮುಂಚೂಣಿಯಲ್ಲಿ ಇರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ನಿರ್ಧಿಷ್ಟ ಕಾಲಮಿತಿಯೊಳಗೆ ಉಚೊತ ವ್ಯಾಕ್ಸಿನೇಷನ್ ಮಾಡುವುದು, ಶೇಕಡಾ 6%ರಷ್ಟು ಹಣ ಆರೋಗ್ಯ ಇಲಾಖೆಗೆ ಮೀಸಲಿಡಬೇಕು, ಮೂಲಭೂತ ಸೌಕರ್ಯಗಳಾದ ಆಮ್ಲಜನಕ ಒದಗಿಸಬೇಕು.ಹೆಚ್ಚುವರಿಯಾಗಿ ಮಾಸಿಕ 10.000ರೂ ಭತ್ಯೆ ನೀಡಬೇಕು, ಕೊವಿಡ್ ಸೋಂಕಿನಿಂದ ಪೀಡಿತರಾದವರಿಗೆಲ್ಲಾ ಕನಿಷ್ಠ 10,ಲಕ್ಷ ಪರಿಹಾರ ನೀಡಬೇಕು ಅಲ್ಲದೇ ಇನ್ನು ಕೆಲವು ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಬೇಕೆಂದು ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರಕ್ಕೆ ಒತ್ತಾಯಿಸಿದರು