ಮಣಿಪಾಲದಲ್ಲಿ ಬೈಕ್ ಮೇಲೆ ʼಹಾಡಹಗಲೇ ಡ್ರಗ್ಸ್ ಮಾರುತ್ತಿದ್ದ ವ್ಯಕ್ತಿಯ ಬಂಧನ

ಉಡುಪಿ : ಕರಾವಳಿ ಭಾಗದಲ್ಲಿ ಹೈಟೆಕ್ ಡ್ರಗ್ಸ್ ಜಾಲ ಪತ್ತೆಯಾದ ಬೆನ್ನಲ್ಲೆ ಇದೀಗ ಮಣಿಪಾಲದಲ್ಲಿ ದ್ವಿಚಕ್ರವಾಹನದಲ್ಲಿ ಡ್ರಗ್ಸ್ (Drug ) ಮಾರುತ್ತಿದ್ದ ವ್ಯಕ್ತಿಯ ಬಂಧನ ಮಾಡಲಾಗಿದೆ ಎಂದು ವರದಿಯಾಗಿದೆ.
ಮಾದಕ ವಸ್ತು ಮಾರುತ್ತಿದ್ದ ವ್ಯಕ್ತಿ ಇಕ್ಬಾಲ್ ಶೇಖ್ (32) ಎಂದು ಗುರುತಿಸಲಾಗಿದೆ. ಈತ ದ್ವಿಚಕ್ರ ವಾಹನದಲ್ಲಿ ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿದ್ದನು ಎಂದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ.
ಬಂಧಿತ ಆರೋಪಿ ಇಕ್ಬಾಲ್ ಶೇಖ್ ಬಳಿಯಿದ್ದ ಒಟ್ಟು 36 ಗ್ರಾಂ ಗಾಂಜಾ, ಪ್ಲಾಸ್ಟಿಕ್ ಕವರ್‌ಗಳಲ್ಲಿ ಇದ್ದ 0.36 ಗ್ರಾಂ ಎಂಡಿಎಂಎ, ಮೊಬೈಲ್ ಫೋನ್, ವೈ ಫೈ ರೂಟರ್ ಮತ್ತು ನಗದು ವಶಪಡಿಸಲಾಗಿದೆ. ಒಟ್ಟು ಮೌಲ್ಯ ಅಂದಾಜು 44,700 ರೂಪಾಯಿ ಎಂದು ತಿಳಿಯಲಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಯಾರಿಗೆ ಯಾವೆಲ್ಲ ಭಾಗಗಳಲ್ಲಿ ಮತ್ತು ಇವರ ಸಹಚರರ ಎಷ್ಟು ಜನರಿದ್ದಾರೆಂದು ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.