ಪಾಕಿಸ್ತಾನದ ಕ್ರಿಕೆಟ್ ಮಂಡಳಿಗೆ ಖಡಕ್ ಉತ್ತರ ಕೊಟ್ಟ ಕ್ರೀಡಾ ಸಚಿವ

ಪಾಕಿಸ್ತಾನದ ಕ್ರಿಕೆಟ್ ಮಂಡಳಿಗೆ ಖಡಕ್ ಉತ್ತರ ಕೊಟ್ಟ ಕ್ರೀಡಾ ಸಚಿವ

ವದೆಹಲಿ: ಪಿಸಿಬಿ (ಪಾಕಿಸ್ತಾನ ಕ್ರಿಕೆಟ್ ಮಂಡಳಿ) 'ಭಾರತದಲ್ಲಿ ವಿಶ್ವಕಪ್​ ನಡೆದರೆ ನಾವು ಭಾಗವಹಿಸುವುದಿಲ್ಲ' ಎಂದು ಹೇಳಿಕೆ ನೀಡಿತ್ತು. ಇದಕ್ಕೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಿರುಗೇಟು ನೀಡಿದ್ದಾರೆ.

'ಪಾಕಿಸ್ತಾನದ ಈ ಹೇಳಿಕೆಗೆ ಬಿಸಿಸಿಐ ಉತ್ತರ ನೀಡಲಿದೆ.

ಭಾರತ ಕ್ರೀಡಾ ಮನೋಭಾವದ ರಾಷ್ಟ್ರ. ಭಾರತ ಇದೇನು ಮೊದಲ ಬಾರಿ ವಿಶ್ವಕಪ್ ಆಯೋಜಿಸುತ್ತಿಲ್ಲ. ಮುಂದಿನ ವಿಶ್ವಕಪ್​ ಭಾರತದಲ್ಲೇ ಆಯೋಜನೆ ಆಗಲಿದೆ. ಅನೇಕ ದೇಶಗಳು ಇದರಲ್ಲಿ ಪಾಲ್ಗೊಳ್ಳಲಿವೆ' ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

'ಭಾರತವನ್ನು ಈಗ ಯಾವುದೇ ವಿಭಾಗದಲ್ಲಿ ನಿರ್ಲಕ್ಷಿಸುವುದು ಸಾಧ್ಯವಿಲ್ಲ. ಭಾರತ ಕ್ರಿಕೆಟ್ ಜಗತ್ತಿನ ಬೆಳವಣಿಗೆಯಲ್ಲಿ ದೊಡ್ಡ ಪಾತ್ರ ವಹಿಸಿದೆ' ಎಂದು ಅನುರಾಗ್ ಠಾಕೂರ್ ಖೇಲೋ ಇಂಡಿಯಾ ಉದ್ಘಾಟನೆಯ ಸಮಯದಲ್ಲಿ ಹೇಳಿದರು. (ಏಜೆನ್ಸೀಸ್)