'ಸಿದ್ದರಾಮಣ್ಣನಿಗೆ ಈಗ ಅರಳು ಮರಳು ': ಸಿಎಂ ಬೊಮ್ಮಾಯಿ ವಾಗ್ಧಾಳಿ

'ಸಿದ್ದರಾಮಣ್ಣನಿಗೆ ಈಗ ಅರಳು ಮರಳು ': ಸಿಎಂ ಬೊಮ್ಮಾಯಿ ವಾಗ್ಧಾಳಿ

ವಿಜಯಪುರ : ಜನಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಷಣ ಮಾಡಿದ್ದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಿನ್ನೆ ರಾಜಾಹುಲಿ ಗರ್ಜನೆಗೆ ಕಾಂಗ್ರೆಸ್​​ನವರು ತತ್ತರಿಸಿದ್ದಾರೆ.

ಯಡಿಯೂರಪ್ಪಗೆ ಅರಳು ಮರಳು ಅಂತಾರೆ ಸಿದ್ದರಾಮಯ್ಯ. ಯಡಿಯೂರಪ್ಪ ಯಾವತ್ತೂ ಜಗ್ಗಲ್ಲ ಕುಗ್ಗಲ್ಲ.. ಸಿದ್ದರಾಮಯ್ಯರ ಹೇಳಿಕೆ ನೋಡಿದ್ರೆ ಅವರಿಗೆ ಅರಳು ಮರಳು ಆದಂತೆ ಕಾಣುತ್ತಿದೆ ಎಂದು ವಾಗ್ಧಾಳಿ ನಡೆಸಿದರು.

ಪ್ರಧಾನಿ ಮೋದಿ ಪ್ರವಾಹ ಬಂದ್ರೆ ಸಹಾಯ ಮಾಡುತ್ತಾರೆ. ಉದ್ಯೋಗ ಯೋಜನೆ ಸೇರಿ ಹಲವು ಯೋಜನೆ ಜಾರಿ ಮಾಡಿದ್ದಾರೆ. ಸಿದ್ದರಾಮಣ್ಣ ಮರಳು ನಿಮಗೆ ಎಂದು ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಧರ್ಮ ಒಡೆಯುವ ಪ್ರಯತ್ನ ಮಾಡುತ್ತಿದೆ ಎಂದರು.