ಮೆಟ್ರೊ ರೈಲಿಗೆ ಫೀಡರ್ ಸೇವೆಯಾಗಿ ಡಬಲ್ ಡೆಕ್ಕರ್ ಬಸ್, ಕೇಬಲ್ ಕಾರ್
ಬೆಂಗಳೂರು: ಮೆಟ್ರೊ ರೈಲಿಗೆ ಫೀಡರ್ ಸೇವೆಯಾಗಿ ಸಮೂಹ ಸಾರಿಗೆ ಉತ್ತೇಜಿಸಲು ಡಬಲ್ ಡೆಕ್ಕರ್ ಬಸ್, ಕೇಬಲ್ ಕಾರ್, ಪಾಡ್ ಟ್ಯಾಕ್ಸಿ ಪರಿಚಯಿಸುವ ಬಗ್ಗೆ ಆಲೋಚನೆ ನಡೆಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಯೋಜನೆಗಳ ಕಾರ್ಯಸಾಧ್ಯತೆ ಬಗ್ಗೆ ಅಧ್ಯಯನ ನಡೆಸಲು ತಜ್ಞರನ್ನು ನಿಯೋಜನೆ ಮಾಡಲು ನಿರ್ಧರಿಸಲಾಯಿತು. ನಗರದಲ್ಲಿ ಸಂಚಾರ ದಟ್ಟಣೆ ಕಡಿಎ ಮಾಡಲು ಸಾಧ್ಯವಿರುವ ಕಡೆಗಳಲ್ಲಿ ಫ್ಲೈ ಓವರ್‌ಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.