ಡ್ರಗ್ಸ್ ಕೇಸ್: ಮುಂಬೈಗೆ ಹಾರಿದ್ರ ಆ್ಯಂಕರ್ ಅನುಶ್ರೀ | Bengaluru |

ಡ್ರಗ್ಸ್ ಕೇಸ್ ಚಾರ್ಜ್ಶೀಟ್ನಲ್ಲಿ ಆ್ಯಂಕರ್ ಅನುಶ್ರೀ ಹೆಸರು ಬಹಿರಂಗವಾಗಿದ್ದು, ಪ್ರತಿಕ್ರಿಯೆಗೆ ಸಿಗದ ಮುಂಬೈಗೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಮಂಗಳವಾರ ಬೆಳಗ್ಗೆ 6:30ಕ್ಕೆ ಯಶವಂತಪುರದ ವೈಭವ್ ಸ್ನೇಹಾ ಅಪಾಟ್ಮೆರ್ಂಟ್ನಲ್ಲಿರುವ ತಮ್ಮ ನಿವಾಸದಿಂದ ಲಗೇಜು ಸಮೇತವಾಗಿ ಮನೆಯಿಂದ ಹೊರಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅನುಶ್ರೀ ಸೇರಿ ಮೂರು ಮಂದಿ ಮುಂಬೈಗೆ ತೆರಳಿದ್ದಾರೆ ಎಂದು ಆಪ್ತವಲಯ ಮಾಹಿತಿ ನೀಡಿದೆ. ಈ ಹಿಂದೆಯೂ ಡ್ರಗ್ಸ್ ಕೇಸಿನಲ್ಲಿ ಅವರ ಹೆಸರು ಕೇಳಿ ಬಂದಿತ್ತು. ಆಗ ಪೊಲೀಸ್ ವಿಚಾರಣೆಗೂ ಹಾಜರಾಗಿದ್ದರು.