ಖಾಸಗಿ ಕಾರು ಚಾಲಕರಿಗೆ ಹಾಗೂ ಮಾಲೀಕರಿಗೆ ಆಹಾತ ಕಿಟ್ ವಿತರಿಸಿದ ಸಮಾಜ ಸೇವಕರಾದ ಸಿಎಂಆರ್ ಶ್ರೀನಾಥ್

ಖಾಸಗಿ ಕಾರು ಚಾಲಕರಿಗೆ ಹಾಗೂ ಮಾಲೀಕರಿಗೆ ಆಹಾತ ಕಿಟ್ ವಿತರಿಸಿದ ಸಮಾಜ ಸೇವಕರಾದ ಸಿಎಂಆರ್ ಶ್ರೀನಾಥ್

ಕೊರೊನಾದಿಂದ ಇಡೀ ವಿಶ್ವವೇ ತತ್ತರಿಸಿದ್ದು, ಅದರಲ್ಲೂ ಪ್ರವಾಸೋದ್ಯಮ ಕ್ಷೇತ್ರವನ್ನೇ ನಂಬಿ ಕೆಲಸ ಮಾಡುವ ಕಾರು ಚಾಲಕರು ಜೀವನ ಸಾಗಿಸಲು ತುಂಬಾ ಕಷ್ಟವಾಗುತ್ತಾ ಇದ್ದು ಇಂತಹವರಿಗೆ ದಾನಿಗಳು ಸಹಾಯ ಮಾಡುತ್ತಾ ಇರುವುದು ಶ್ಲಾಘನೀಯ ಕೆಲಸ ಎಂದು ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ತಿಳಿಸಿದ್ರು. ನಗರದ ಕಾರು ನಿಲ್ದಾಣದಲ್ಲಿ ಜಿಲ್ಲಾ ರೋಟರಿ ಸೆಂಟ್ರಲ್ ಹಾಗೂ ಸಿಎಂಆರ್ ಫೌಂಡೇಶನ್ ವತಿಯಿಂದ ಖಾಸಗಿ ಕಾರು ಚಾಲಕರಿಗೆ ಹಾಗೂ ಮಾಲೀಕರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು ಕೊರೊನಾ ಸಂದರ್ಭದಲ್ಲಿ ಲಾಕ್ ಡೌನ್ ಆಗಿತ್ತು ಕೆಲಸವಿಲ್ಲದೇ ಇಎಂಐ ಕಟ್ಟಲು ಸಾಧ್ಯವಿಲ್ಲವಾಗಿತ್ತು ಕೊರೊನಾ ಕಡಿಮೆಯಾಗುತ್ತಾ ಇದ್ದು ಅತಿಥಿಗಳನ್ನು ಕರೆದುಕೊಂಡು ಹೋಗುವಾಗ ಎಚ್ಚರಿಕೆಯಿಂದ ವರ್ತಿಸಬೇಕು ಎಂದರು
ಜಿಲ್ಲೆಯಲ್ಲಿ 67% ಕೋವಿಡ್ ಲಸಿಕೆ ಪಡೆದಿದ್ದು ಇನ್ನೂ ಉಳಿಕೆಯವರಿಗೆ ಆದಷ್ಟು ಬೇಗ ಲಸಿಕೆ ನೀಡಲು ಸರಕಾರ ಮತ್ತು ಜಿಲ್ಲಾಡಳಿತ ಮುಂದೆ ಬಂದಿದ್ದು ಲಸಿಕೆ ಪಡೆದರೇ ಅಷ್ಟೇ ಮೂರನೇ ಅಲೆ ಬಂದರೂ ಧೈರ್ಯದಿಂದ ಇರಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಕಾರು ಚಾಲಕರು ಮತ್ತು ಕುಟುಂಬದವರು ಲಸಿಕೆ ಹಾಕಿಸಿಕೊಳ್ಳಲು ತಮ್ಮ ನಿಲ್ದಾಣದಲ್ಲಿ ಒಂದು ದಿನದ ಲಸಿಕಾ ಅಭಿಯಾನ ಮಾಡಲಿದ್ದು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು
ಇದೇ ಸಂದರ್ಭದಲ್ಲಿ ಮಾತನಾಡಿದ ರೋಟರಿ ಸೆಂಟ್ರಲ್‌ ಜಿಲ್ಲಾ ಅಧ್ಯಕ್ಷ ಸಮಾಜಸೇವಕ ಸಿಎಂಆರ್ ಶ್ರೀನಾಥ್ ಕೊರೊನಾದಿಂದ ಕಾರು ಚಾಲಕರು ತುಂಬ ಸಂಕಷ್ಟ ಅನುಭವಿಸುತ್ತಿದ್ದಾರೆ ಅಂತವರಿಗೆ ಇಂದು ಆಹಾತ ಕಿಟ್‌ಗಳನ್ನು ವತರಣೆ ಮಾಡುತ್ತಾ ಇದ್ದೆವೆ ಎಂದು ತಿಳಿಸಿದ್ರು.