Puneet Rajkumar Punya Smarane: 'ಅರಮನೆ ಮೈದಾನ'ದಲ್ಲಿ ದೊಡ್ಮನೆ 'ಅನ್ನಸಂತರ್ಪಣೆ' ಆರಂಭ: ಅಭಿಮಾನಿ ದೇವರುಗಳಿಗೆ ಖುದ್ದು ಊಟ ಬಡಿಸಿದ 'ದೊಡ್ಮನೆ ಫ್ಯಾಮಿಲಿ
ಬೆಂಗಳೂರು: ಇಂದು ನಟ ಪುನೀತ್ ರಾಜ್ ಕುಮಾರ್ ಪುಣ್ಯ ಸ್ಮರಣೆಯ ನಿಮಿತ್ತ ಅರಮನೆ ಮೈದಾನದಲ್ಲಿ ಸಾವಿರಾರೂ ಜನರಿಗೆ ದೊಡ್ಮನೆ ಕುಟುಂಬದಿಂದ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯುತ್ತಿದೆ. ವೆಜ್ ಮತ್ತು ನಾನ್ ವೆಜ್ ಎರಡು ಬಗೆಯ ಭಕ್ಷ್ಯಗಳನ್ನು ಅಭಿಮಾನಿಗಳು ಹಾಗೂ ಗಣ್ಯರಿಗೆ ವ್ಯವಸ್ಥೆ ಮಾಡಲಾಗಿದೆ.
ಅರಮನೆ ಮೈದಾನದಲ್ಲಿ ನಟ ಪುನೀತ್ ರಾಜ್ ಕುಮಾರ್ ಪುಣ್ಯ ಸ್ಮರಣೆಯ ಅಂಗವಾಗಿ ನಡೆಯುತ್ತಿರುವಂತ ಅನ್ನಸಂತರ್ಪಣೆ ಕಾರ್ಯಕ್ರಮ ಆರಂಭಗೊಂಡಿದೆ. ನಟ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಸೇರಿದಂತೆ ದೊಡ್ಮನೆ ಫ್ಯಾಮಿಲಿ ಖುದ್ದು ಮುಂದೆ ನಿಂತು ಅಭಿಮಾನಿ ದೇವರುಗಳಿಗೆ, ಗಣ್ಯರಿಗೆ ಊಟವನ್ನು ಬಡಿಸುತ್ತಿದ್ದಾರೆ.
ಅಂದಹಾಗೇ ವೆಜ್ ಪ್ರಿಯರಿಗೆ ವೆಜ್ ಊಟ, ನಾನ್ ವೆಜ್ ಪ್ರಿಯರಿಗೆ ಬಾಡೂಟದ ವ್ಯವಸ್ಥೆಯನ್ನು ಮಾಡಲಾಗಿದೆ. 8,500 ಮೊಟ್ಟೆ ಬೇಯಿಸಲಾಗಿದೆ. ನಾರೂರು ಕೇಜೆ ಕೋಳಿ, ಮಟನ್ ಸಾಂಬಾರ್ ವ್ಯವಸ್ಥೆ ಮಾಡಲಾಗಿದೆ. ವೆಜ್ ಪ್ರಿಯರಿಗೂ ಬಗೆ ಬಗೆಯ ಊಟದ ವ್ಯವಸ್ಥೆಯನ್ನು ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿದೆ. ಇದೀಗ ಊಟ ಆರಂಭಗೊಂಡಿದ್ದು, ಯಾವುದೇ ಗದ್ದಲ ಮಾಡದೇ ಪ್ರೀತಿಯಿಂದ ಊಟ ಮಾಡಿ, ಖುಷಿಯಿಂದ ಜೋಪಾನವಾಗಿ ಮನೆಗೆ ಮರಳುವಂತೆ ನಟ ರಾಘವೇಂದ್ರ ರಾಜ್ ಕುಮಾರ್ ಮನವಿ ಮಾಡಿದ್ದಾರೆ.