12,300 ಅಡಿ ಎತ್ತರದಲ್ಲಿ ಯೋಧರಿಗೆ ಯೋಗ ಕಲಿಸಿದ ಪದ್ಮಿನಿ ಜೋಗ್

ಬೆಂಗಳೂರು ; ಮೂಲದ ಪದ್ಮಿನಿ ಜೋಗ್ ತಮ್ಮ 78ನೇ ವಯಸ್ಸಿನಲ್ಲೂ 12,300 ಅಡಿ ಎತ್ತರಕ್ಕೆ ತೆರಳಿ ಯೋಧರಿಗೆ ಯೋಗ ಕಲಿಸಿ ಬಂದಿದ್ದಾರೆ. ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿರುವ ಔಟ್ಪೋಸ್ಟ್ಗಳಲ್ಲಿ ನಿಯೋಜಿಸಲಾದ ಸೈನಿಕರಿಗೆ ಯೋಗ ಕಲಿಸಿದ್ದಾರೆ. ಪದ್ಮಿನಿ ಪತಿ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿದ್ದ ಲೆಫ್ಟಿನೆಂಟ್ ಕರ್ನಲ್ ಪ್ರತಾಪ್ ಜೋಗ್ ಜೊತೆ ಪದ್ಮಿನಿ ದೇಶಾದ್ಯಂತ ಪ್ರಯಾಣಿಸುತ್ತಿದ್ದರು. ಪ್ರತಾಪ್ ನಿಧನದ ಬಳಿಕ ಪದ್ಮಿನಿ ಸೈನಿಕರಿಗೆ ಯೋಗ ಕಲಿಸುತ್ತಿದ್ದಾರೆ.