ಬೆಂಗಳೂರಿಗರೇ ಗಮನಿಸಿ : ಇಂದು ಮತ್ತು ನಾಳೆ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಬೆಂಗಳೂರಿಗರೇ ಗಮನಿಸಿ : ಇಂದು ಮತ್ತು ನಾಳೆ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಬೆಂಗಳೂರು : ಬೆಂಗಳೂರಿಗರೇ ಗಮನಿಸಿ. ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನಾಳೆ ವಿದ್ಯುತ್ ಕಡಿತಗೊಳ್ಳುವ ಸಾಧ್ಯತೆಯಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಪ್ರಕಟಣೆ ಹೊರಡಿಸಿದೆ.

ಹಲವು ತುರ್ತು ಕೆಲಸಗಳು ನಡೆಯುತ್ತಿರುವ ಹಿನ್ನೆಲೆ ಜನವರಿ 12 ರಂದು ಇಂದು ಹಾಗೂ ಜ.13 ರಂದು ನಾಳೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ.

ಇಂದು ಗುರುವಾರ, ದೇವಿಕಿರಣ, ಡೆಕ್ಕನ್ ಹೆರಾಲ್ಡ್, ಕೆ.ಎ.ಐ.ಡಿ 1ನೇ ಹಂತ, ಕೆ.ಎ.ಐ.ಡಿ 2ನೇ ಹಂತ, ಗೇರುಪ್ಲಯ ಕೈಗಾರಿಕಾ ಪ್ರದೇಶ, ಇಸ್ರೋ, ಹೆಣ್ಣೂರು ಬಂಡೆ, ಸಾಮುದ್ರಿಕಾ ಎನ್ಕ್ಲೇವ್, ಗ್ರೇಸ್ ಗಾರ್ಡನ್, ಕ್ರೈಸ್ಟ್ ಜಯಂತಿ ಕಾಲೇಜು, ಗುತ್ತೂರು, ಬೈರೋಹಳ್ಳಿ, ರಾಮೋಹಳ್ಳಿ ಬಿಲಿಶಿವಾಲೆ, ಆಶಾ ಟೌನ್ಶಿಪ್, ಐಶ್ವರ್ಯ ಎಲ್/ಓ, ಮಾರುತಿ ಟೌನ್ಶಿಪ್, ಹರಿಹರ-ಹೊಸಪೇಟೆ, ಕೆಂಗೇರಿ ಟೌನ್, ಬಿಡದಿ ಗ್ರಾಮಾಂತರ, ನಗರಗಿರಿ ಟೌನ್ಶಿಪ್, ಆನಗೋಡು, ಅತ್ತಿಗೆರೆ, ಮಾಯಕೊಂಡ, ದಾವಣಗೆರೆ, ಯರಗುಂಟಾ, ಹರಿಹರ ಟೌನ್ ನಲ್ಲಿ ವಿದ್ಯುತ್ ಕಡಿತವಾಗಲಿದೆ.

ಜ.13 ರಂದು ನಾಳೆ ಮೈಲಸಂದ್ರ, ಐಡಿಯಲ್ ಹೋಮ್ಸ್, ಕೆಂಗೇರಿ ಭಾಗಗಳು, ಚನ್ನಸಂದ್ರ, ಉತ್ತರಹಳ್ಳಿ, ರಾಜರಾಜೇಶ್ವರಿ ದೇವಸ್ಥಾನ, ಪಟ್ಟಣಗೆರೆ, ಗ್ಲೋಬಲ್ ವಿಲೇಜ್, ಬಿಜಿಎಸ್ ಆಸ್ಪತ್ರೆ, ಪೂರ್ಣ ಪ್ರಜ್ಞಾ ಲೇಔಟ್, ಸಚ್ಚಿದಾನಂದ ನಗರ, ವಡ್ಡರಪಾಳ್ಯ, ಗಾಣಕಲ್ಲು, ಬಿಇಎಂಎಲ್ ಲೇಔಟ್ ಸೇರಿ ಹಲವು ಕಡೆ ವಿದ್ಯುತ್ ವ್ಯತ್ಯಯವಾಗಲಿದೆ.