ಚಾಮುಂಡಿಬೆಟ್ಟದ ಬಳಿ ಪ್ರವಾಸಿಗರಿದ್ದ ಬಸ್ ನಲ್ಲಿ ಬೆಂಕಿ: ತಪ್ಪಿದ ಭಾರೀ ದುರಂತ

ಚಾಮುಂಡಿಬೆಟ್ಟದ ಬಳಿ ಪ್ರವಾಸಿಗರಿದ್ದ ಬಸ್ ನಲ್ಲಿ ಬೆಂಕಿ: ತಪ್ಪಿದ ಭಾರೀ ದುರಂತ

ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಬೆಳ್ಳಂಬೆಳಗ್ಗೆ ಭಾರೀ ಅನಾಹುತವೊಂದು ತಪ್ಪಿದೆ.

ಚಾಮುಂಡಿಬೆಟ್ಟ ದ ಬಸ್‌ ನಿಲ್ದಾಣದ ಸಮೀಪ ಸುಮಾರು 50ಕ್ಕೂ ಹೆಚ್ಚು ಮಂದಿ ಪ್ರವಾಸಿಗರಿದ್ದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅವಘಡ ಸಂಭವಿಸುವುದು ತಪ್ಪಿದೆ.ಗುಜರಾತ್ ನಿಂದ ಬಸ್‍ನಲ್ಲಿ ಪ್ರವಾಸಿಗರು ಚಾಮುಂಡಿಬೆಟ್ಟಕ್ಕೆ ಬಂದಿದ್ದರು. ಆದರೆ ಬೆಟ್ಟದ ಸಮೀಪ ಇರುವ ಬಸ್ ನಿಲ್ದಾಣದಲ್ಲಿ ಡಿಸೇಲ್ ಲೀಕೇಜ್ ನಿಂದ ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್ಸಿನ ಸೈಲೆನ್ಸರ್ ಪೈಪ್ ನಿಂದ ಇದ್ದಕ್ಕಿದ್ದ ಹಾಗೆ ಹೊಗೆ ಬರಲಾರಂಭಿಸಿದೆ. ಬಳಿಕ ಪೈಪ್ ನಿಂದ ಬೆಂಕಿ ಕಾಣಿಸಿಕೊಂಡಿದೆ.ಇದನ್ನು ಗಮನಿಸಿದ ಚಾಲಕ ಕೂಡಲೇ ಬೆಂಕಿಯ ಸಂಪರ್ಕದ ವಯರ್ ಗಳನ್ನು ಕಟ್ ಮಾಡಿದ್ದಾರೆ. ಇತ್ತ ಪ್ರವಾಸಿಗರನ್ನು ತಕ್ಷಣವೇ ಬಸ್ಸಿನಿಂದ ಕೆಳಗಿಳಿಸಿದ್ದಾರೆ. ಪರಿಣಾಮ ಪ್ರಯಾಣಿಕರು ದೊಡ್ಡ ಅವಘಡದಿಂದ ಪಾರಾಗಿದ್ದಾರೆ.