ಓ ನನಗದು ಗೊತ್ತಿರಲಿಲ್ಲ: ಹಾರ್ದಿಕ್‌ ಮಾತು ವೈರಲ್‌

ಓ ನನಗದು ಗೊತ್ತಿರಲಿಲ್ಲ: ಹಾರ್ದಿಕ್‌ ಮಾತು ವೈರಲ್‌

ಪುಣೆ: ಪಂದ್ಯದ ಟಾಸ್‌ ವೇಳೆ ಹಾರ್ದಿಕ್‌ ಪಾಂಡ್ಯ ನೀಡಿದ ಪ್ರತಿಕ್ರಿಯೆ ವಿಶೇಷ ಚರ್ಚೆಗೆ ಕಾರಣವಾಗಿದೆ.

ಪುಣೆ ಪಿಚ್‌ ಇತಿಹಾಸ ನೋಡಿದರೆ, ಅದು ಮೊದಲು ಬ್ಯಾಟಿಂಗ್‌ ಮಾಡಿದ ತಂಡಗಳನ್ನೇ ಬಹುತೇಕ ಬಾರಿ ಗೆಲ್ಲಿಸಿದೆ. ಹೀಗಿದ್ದರೂ ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಆಯ್ದುಕೊಂಡ ಭಾರತ ತಂಡದ ನಾಯಕ ಹಾರ್ದಿಕ್‌ ಪಾಂಡ್ಯಗೆ, ಈ ವಿಚಾರವನ್ನು ಮುರಳಿ ಕಾರ್ತಿಕ್‌ ಗಮನಕ್ಕೆ ತಂದರು.

'ಓ ಹೌದಾ ನನಗಿದು ಗೊತ್ತಿರಲಿಲ್ಲ' ಎಂದು ಪಾಂಡ್ಯ ಉತ್ತರಿಸಿದರು. ಅದೀಗ ವೈರಲ್‌ ಆಗಿದೆ. ಭಾರತದಿಂದ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ 206 ರನ್‌ಗಳಷ್ಟು ಬೃಹತ್‌ ಮೊತ್ತ ಗಳಿಸಿತು! ಇದಾದ ಮೇಲಂತೂ ಇನ್ನಷ್ಟು ಚರ್ಚೆಗಳಿಗೆ ಕಾರಣವಾಯಿತು.