ಸಿಂಹದ ಗುಹೆಗೆ ನುಗ್ಗಿದ ಪಾಕ್ ಡ್ರೋನ್ಗಳು; ಯಾರ ಕಣ್ಣು ತಪ್ಪಿಸಿದ್ರೂ ಬಿ.ಎಸ್.ಎಫ್ ಬಿಡಲ್ಲ.

ನವದೆಹಲಿ: ಸದಾ ಒಂದಿಲ್ಲಾ ಒಂದು ರೀತಿಯಲ್ಲಿ ಕಾಟ ಕೊಡುತ್ತಿರುವ ಪಾಕಿಸ್ತಾನ ಆಗಾಗ ಭಾರತದ ಗಡಿ ಒಳಕ್ಕೆ ಡ್ರೋನ್ ಬಿಡತೊಡಗಿದೆ. ಈ ಡ್ರೋನ್ಗಳನ್ನು ರೇಡಾರ್ ಮೂಲಕ ಗುರುತಿಸುವುದು ಕಷ್ಟ. ಆದರೂ ಭಾರತೀಯ ಗಡಿ ರಕ್ಷಣಾ ಪಡೆ ಪಾಕಿಸ್ತಾನಿ ಡ್ರೋನ್ ಒಂದನ್ನು ಪಂಜಾಬ್ನ ಫೀರೋಜ್ಪುರ್ನಲ್ಲಿ ಹಿಡಿದಿದೆ.
ಗಡಿ ಭಾಗದಲ್ಲಿ ಕಾರ್ಯನಿರತವಾಗಿದ್ದ ಬಿ.ಎಸ್.ಎಫ್ನ 136ನೇ ಬೆಟಾಲಿಯನ್ಗೆ ಡ್ರೋನ್ ಹಾರುವ ಸದ್ದು ದೂರದಿಂದ ಕೇಳಿಸಿದೆ. ಕೂಡಲೇ ಕಾರ್ಪ್ರವೃತ್ತರಾದ ಯೋಧರು ಡ್ರೋನ್ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಕೆಲ ಸಮಯದ ನಂತರ ಫಿರೋಜ್ಪುರದ ಗಂಡು ಕಿಲ್ಚಾ ಎನ್ನುವ ಹಳ್ಳಿಯ ಬಳಿ ಅಕ್ರಮವಾಗಿ ಭಾರತ ಪ್ರವೇಶ ಮಾಡುವ ಡ್ರೋನ್ ಕಂಡುಬಂದಿದೆ. ಮಂಗಳವಾರ ರಾತ್ರಿ 11.25ಕ್ಕೆ ಬಿ.ಎಸ್.ಎಫ್ ಡ್ರೋನ್ ಸೆರೆ ಹಿಡಿದಿದೆ ಎಂದು ಬಿ.ಎಸ್.ಎಫ್ ಪಡೆ ಮಾಹಿತಿ ನೀಡಿದೆ.
'ಸಂಬಂಧಿತ ಪ್ರದೇಶದಲ್ಲಿ ಹುಡುಕಾಟ ಮಾಡುವಾಗ, ಬಿ.ಎಸ್.ಎಫ್ ಪಡೆಗಳು ಹೆಕ್ಸಾ-ಕಾಪ್ಟರ್ ಅಥವಾ ಡ್ರೋನ್ ಅನ್ನು ಗುಂಡು ಹಾರಿಸಿ ಹೊಡೆದುರುಳಿಸಿದ್ದಾರೆ. ಅದನ್ನು ಬಿ.ಎಸ್.ಎಫ್ ಪಡೆ ಪಂಜಾಬ್ ಪೊಲೀಸರ ಸಹಯೋಗದಲ್ಲಿ ವಶಪಡಿಸಿದೆ. ಈ ಡ್ರೋನ್ನಲ್ಲಿ 2.5 ಕೆಜಿಯ ಎರಡು ಪ್ಯಾಕೆಟ್ ಡ್ರಗ್ಸ್ಅನ್ನು ಸಾಗಿಸಲಾಗುತ್ತಿತ್ತು' ಎಂದು ಬಿ.ಎಸ್.ಎಫ್ ಅಧಿಕಾರಿಗಳು ಮಾಹಿತಿ ನೀಡಿದರು. (ಏಜೆನ್ಸೀಸ್)