ಹೀಗೆ ಮಾಡಿದರೆ ಹೊಸ ನಾಯಕನ ಜೊತೆ ಆಡಬೇಕಾಗುತ್ತದೆ: ಎಂಎಸ್ ಧೋನಿ ಖಡಕ್ ಎಚ್ಚರಿಕೆ
ಇಂಡಿಯನ್ ಪ್ರೀಮಿಯರ್ ಲೀಗ್‌ನ ಈ ಬಾರಿಯ ಆವೃತ್ತಿಯಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲ ಗೆಲುವು ಸಾಧಿಸಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 12 ರನ್‌ಗಳ ಅಂತರದ ಗೆಲುವು ಸಾಧಿಸಿದ್ದು ತವರಿನ ಪ್ರೇಕ್ಷಕರ ಮುಂದೆ ಮಿಂಚಿನ ಪ್ರದರ್ಶನ ನೀಡಿದೆ.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್‌ಗಳು ಅತಿಯಾಗಿ ವೈಡ್ ಹಾಗೂ ನೊಬಾಲ್‌ಗಳನ್ನು ಎಸೆದಿದ್ದಾರೆ. ಈ ಬಗ್ಗೆ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಪಂದ್ಯದ ಮುಕ್ತಾಯದ ಬಳಿಕ ಎಚ್ಚರಿಕೆ ನೀಡಿದ್ದಾರೆ. ನೋಬಾಲ್ ವೈಟ್‌ಗಳನ್ನು ಎಸೆಯುವುದನ್ನು ನಿಲ್ಲಿಸಿ, ಇಲ್ಲವೇ ಹೊಸ ನಾಯಕನ ಅಡಿಯಲ್ಲಿ ಆಡಿ ಎಂದಿ ಎಂಎಸ್ ಧೋನಿ ಖಡನ್ ಎಚ್ಚರಿಕೆ ನೀಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಬೌಲರ್ ಆಗಿರುವ ದೀಪಕ್ ಚಹರ್ ನಾಲ್ಕು ಓವರ್‌ಗಳ ಬೌಲಿಂಗ್‌ನಲ್ಲಿ ಒಂದು ವಿಕೆಟ್ ಕೂಡ ಪಡೆಯಲು ಸಾಧ್ಯವಾಗದೆ 55 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಇದರಲ್ಲಿ 5 ವೈಡ್ ಎಸೆತಗಳನ್ನು ಎಸೆದಿದ್ದರು ಅನುಭವಿ ಬೌಲರ್. ಇನ್ನು ತಿಚಾರ್ ದೇಶ್‌ಪಾಂಡೆ ನಾಲ್ಕು ಓವರ್‌ಗಳಲ್ಲಿ 45 ರನ್ ನೀಡಿ 2 ವಿಕೆಟ್ ಪಡೆದುಕೊಂಡಿದ್ದಾರೆ. ಮೂರು ನೋಬಾಳ್ ಹಾಘೂ ನಾಲ್ಕು ವಟ್‌ಗಳನ್ನು ಎಸೆದಿದ್ದಾರೆ ಈ ಬೌಲರ್. ಈ ಬೌಲಿಂಗ್ ಪ್ರದರ್ಶನ ನಾಯಕ ಎಂಎಸ್ ಧೋನಿಗೆ ಅಸಮಾಧಾನವನ್ನುಂಟು ಮಾಡಿದೆ.
ಆದರೆ ಡೆವೋನ್ ಕಾನ್ವೆ, ಋತುರಾಜ್ ಗಾಯಕ್ವಾಡ್ ಹಾಗೂ ಮೊಯೀನ್ ಅಲಿ ಅವರ ಅದ್ಭುತ ಪ್ರದರ್ಶನದಿಂದಾಗಿ ಚೆನ್ನೂ ಸೂಪರ್ ಕಿಂಗ್ಸ್ ತಂಡ ಈ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆರಂಬಿಕ ಆಟಗಾರರಾದ ಡೆವೋನ್ ಕಾನ್ವೆ ಹಾಗೂ ಗಾಯಕ್ವಾಡ್ ಭರ್ಜರಿ ಪ್ರದರ್ಶನದಿಂದಾಗಿ ಸಿಎಸ್‌ಕೆ ಮೊದಲಿಗೆ ಬ್ಯಾಟಿಂಗ್ ನಡೆಸಿ 7 ವಿಕೆಟ್ ಕಳೆದುಕೊಂಡು 217 ರನ್‌ಗಳಿಸಿತು.
ಈ ಪಂದ್ಯದಲ್ಲಿ 12 ರನ್‌ಗಳ ಅಂತರದ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ, "ಇದೊಂದು ಹೈಸ್ಕೋರಿಂಗ್ ಪಂದ್ಯವಾಗಿದ್ದು ಭಯಂಕರವಾಗಿತ್ತು. ನಾವೆಲ್ಲರು ಕೂಡ ಇಲ್ಲಿನ ಪಿಚ್ ಹೇಗಿರಲಿದೆ ಎಂದು ಯೋಚಿಸುತ್ತಿದ್ದೆವು. ನಮಗೆ ಆ ಅನುಮಾನಗಳು ಇದ್ದವು. ಒಟ್ಟಾರೆಯಾಗಿ ಇದೊಂದು ಆರಂಭಕ್ಕೆ ಸೂಕ್ತವಾದ ಪಂದ್ಯವಾಗಿದ್ದು ಕಳೆದ ಐದು-ಆರು ವರ್ಷಗಳ ಬಳಿಕ ನಾವಿಲ್ಲಿ ಆಡುತ್ತಿದ್ದೇವೆ. ಇದು ಬಹಳ ನಿಧಾನಗತಿಯ ಪಿಚ್ ಆಗಿರಲಿದೆ ಎಂದು ನಾನು ಭಾವಿಸಿದ್ದೆ" ಎಂದಿದ್ದಾರೆ ಎಂಎಸ್ ಧೋನಿ.
"ಇದು ಹೆಚ್ಚು ರನ್‌ಗಳಿಸಬಹುದಾದ ಪಿಚ್ ಆಗಿದೆ. ಮುಂದಿನ ಆರು ತವರಿನ ಪಂದ್ಯಗಳಲ್ಲಿ ಇಲ್ಲಿನ ಪಿಚ್ ಹೇಗಿರಲಿದೆ ಎಂಬುದನ್ನು ನೋಡಬೇಕು.ನಾವಿಲ್ಲಿ ಹೆಚ್ಚುಇನ ರನ್‌ಗಳಿಸಬಹುದು ಎಂಬ ವಶ್ವಾಸದಲ್ಲಿದ್ದೇವೆ. ನಮ್ಮ ವೇಗದ ಬೌಲಿಂಗ್‌ನಲ್ಲಿ ಪ್ರಗತಿ ಕಾಣಬೇಕಾದ ಅಗತ್ಯವಿದ್ದು ಪರಿಸ್ಥಿತಿಗೆ ತಕ್ಕಂತೆ ಬೌಲಿಂಗ್ ನಡೆಸಬೇಕು. ಫ್ಲ್ಯಾಟ್ ವಿಕೆಟ್ ಆಗಿದ್ದರು ಕೂಡ ಫೀಲ್ಡರ್‌ಗಳು ಇದ್ದಲ್ಲಿಗೆ ಬೌಲಿಂಗ್ ನಡೆಸುವಂತೆ ಮಾಡಬೇಕು"
"ಅವರು ನೋಬಾಲ್ ಇಲ್ಲದೆ, ವೈಡ್‌ಗಳನ್ನು ಕಡಿಮೆ ಮಾಡಿಕೊಂಡು ಬೌಲಿಂಗ್ ನಡೆಸಬೇಕು. ನಾವು ಬಹಳ ಎಕ್ಸ್‌ಟ್ರಾ ಎಸೆತಗಳನ್ನು ಹಾಕಿದ್ದೇವೆ. ಅವುಗಳನ್ನು ಕಡಿತಗೊಳಿಸುವ ಅಗತ್ಯವಿದೆ. ಇಲ್ಲವಾದರೆ ಅವರು ಹೊಸ ನಾಯಕನ ಅಡಿಯಲ್ಲಿ ಆಡಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ ಸಿಎಸ್‌ಕೆ ನಾಯಕ ಎಂಎಸ್ ಧೋನಿ