ಫ್ರಾನ್ಸ್​ನ​ ಸ್ಟಾರ್ ಆಟಗಾರ ಕರೀಂ ಬೆಂಜೆಮಾ ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಗುಡ್​ ಬೈ

ಫ್ರಾನ್ಸ್​ನ​ ಸ್ಟಾರ್ ಆಟಗಾರ ಕರೀಂ ಬೆಂಜೆಮಾ ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಗುಡ್​ ಬೈ

ಫ್ರಾನ್ಸ್ ತಂಡದ ಸ್ಟ್ರೈಕರ್ ಕರೀಂ ಬೆಂಜೆಮಾ ಅವರು ಅಂತಾರಾಷ್ಟ್ರೀಯ ಫುಟ್​ಬಾಲ್​ಗೆ ಗುಡ್​ ಬೈ ಹೇಳಿದ್ದಾರೆ. ಫಿಫಾ ವರ್ಲ್ಡ್‌ಕಪ್‌ ಫೈನಲ್‌ ಪಂದ್ಯದಲ್ಲಿ ಫ್ರಾನ್ಸ್‌ ಸೋಲು ಕಂಡ ಹಿನ್ನೆಲೆಯಲ್ಲಿ 2022ರ ಬಾಲನ್ ಡಿ ಓರ್ ಪ್ರಶಸ್ತಿ ವಿಜೇತ ಕರೀಂ ಬೆಂಜೆಮಾ ನಿವೃತ್ತಿ ಘೋಷಿಸಿದ್ದಾರೆ. ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬೆಂಜೆಮಾ, ಪ್ರಾನ್ಸ್​ ತಂಡದ ಟ್ರಂಪ್​ ಕಾರ್ಡ್​ ಎಂದು ಭಾವಿಸಲಾಗಿತ್ತು. ಆದ್ರೆ, ಟೂರ್ನಿ ಆರಂಭಕ್ಕೆ ಕೆಲವೇ ದಿನಗಳಿರುವಾಗ ಅಭ್ಯಾಸದ ವೇಳೆ ಗಾಯಗೊಂಡಿದ್ದರು. ಇದರಿಂದ ವಿಶ್ವಕಪ್​ ಹೊರಬಿದ್ದಿದ್ದರು.