ಓವೈಸಿ ಪಕ್ಷದ ನಾಯಕನ ಕಚೇರಿಯಲ್ಲೇ ವಿದ್ಯಾರ್ಥಿ ಕೊಲೆ
ಹೈದರಾಬಾದ್: ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಸ್ಥಳೀಯ ಕಾರ್ಪೋರೇಟರ್ ಕಚೇರಿಯಲ್ಲಿ ವಿದ್ಯಾರ್ಥಿಯೊಬ್ಬನ ಹತ್ಯೆಯಾಗಿದೆ. ಹೈದರಾಬಾದ್ನ ಲಲಿತಾಬಾಗ್ ಪ್ರದೇಶದಲ್ಲಿರುವ ಕಚೇರಿಯಲ್ಲಿ ಕೊಲೆ ನಡೆದಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಕಾರ್ಪೊರೇಟರ್ ಸಂಬಂಧಿ 22 ವರ್ಷದ ವಿದ್ಯಾರ್ಥಿ ಮುರ್ತಾಜಾ ಅನಸ್ ಎಂದು ಗುರುತಿಸಿದ್ದಾರೆ. ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ.