ಜೆಡಿಎಸ್‌ಗೆ ಮತ ನೀಡಿದ್ರೆ ಪ್ರಯೋಜನವಿಲ್ಲ: ಸಚಿವ ಡಾ ಅಶ್ವತ್ಥ್‌ ನಾರಾಯಣ್‌ ಆಕ್ರೋಶ

ಜೆಡಿಎಸ್‌ಗೆ ಮತ ನೀಡಿದ್ರೆ ಪ್ರಯೋಜನವಿಲ್ಲ: ಸಚಿವ ಡಾ ಅಶ್ವತ್ಥ್‌ ನಾರಾಯಣ್‌ ಆಕ್ರೋಶ

ಮೈಸೂರು : ಮುಂದಿನ ಚುನಾವಣೆಗಾಗಿ ಬಿಜೆಪಿ ಭರ್ಜರಿ ಸಿದ್ದತೆ ನಡೆಸುತ್ತಿದ್ದು, ರಾಜ್ಯಕ್ಕೆ ಮತ್ತೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಷಾ ಆಗಮನ ಹಿನ್ನೆಲೆ ವಿಪಕ್ಷಗಳು ಹೇಳಿಕೆಗಳ ವಿರುದ್ಧ ಮೈಸೂರಿನಲ್ಲಿ ಸಚಿವ ಡಾ ಅಶ್ವತ್ಥ್‌ ನಾರಾಯಣ್‌ ಪ್ರತಿಕ್ರಿಯೆ ನೀಡಿದ್ದಾರೆ.ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಸಚಿವ ಡಾ ಅಶ್ವತ್ಥ್‌ ನಾರಾಯಣ್‌ ಮಾತನಾಡಿ, ಈಗ ಕಾಂಗ್ರೆಸ್‌ನವರು ಅಧಿಕಾರವಿಲ್ಲದೇ ಖಾಲಿಯಿದ್ದಾರೆ, ಅವರಿಗೆ ಹೇಳಲು ಏನೂ ಇಲ್ಲ. ಅದಕ್ಕಾಗಿ ಸುಖಾಸುಮ್ಮನೆ ಮಾತನಾಡುತ್ತಿದ್ದಾರೆ. ಜನಸಂಕಲ್ಪ ಯಾತ್ರೆಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ರಾಮನಗರ, ಮಂಡ್ಯ ಜಿಲ್ಲೆಯಲ್ಲಿ ವಿಪಕ್ಷಗಳ ಕ್ಯಾತೆ ಇದ್ದೇ ಇದೆ. ನಮ್ಮದು ಅಭಿವೃದ್ಧಿ ಪರ ಬಿಜೆಪಿ ಸರ್ಕಾರ ಅದಕ್ಕೆ ಬೆಂಬಲಿಸುತ್ತಿದ್ದಾರೆ. ಜೆಡಿಎಸ್‌ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವುದಿಲ್ಲ. ಜೆಡಿಎಸ್‌ಗೆ ಮತ ನೀಡಿದ್ರೆ ಪ್ರಯೋಜನವಿಲ್ಲ . ಬಿಜೆಪಿಯಲ್ಲಿ ಮುಕ್ತವಾಗಿ ಬೆಳೆಯುವ ಅವಕಾಶವಿದೆ .ಎಂದು ವಿಪಕ್ಷಗಳ ವಿರುದ್ಧ ಸಚಿವ ಡಾ ಅಶ್ವತ್ಥ್‌ ನಾರಾಯಣ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.