ಮುಳ್ಳಯ್ಯನಗಿರಿಯಲ್ಲಿ ಭಾರಿ ಮಳೆ
ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಸಾಲಿನಲ್ಲಿಂದು ಭಾರಿ ಮಳೆ ಸುರಿದಿದೆ. ಧಾರಾಕಾರ ಮಳೆಗೆ ದತ್ತಪೀಠಕ್ಕೆ ಹೋಗುವ ಮಾರ್ಹದಲ್ಲಿನ ಹೊನ್ನಮ್ಮನ ಹಳ್ಳದಲ್ಲಿ ಭಾರಿ ನೀರು ಹರಿದಿದೆ.ನೀರಿನ ರಭಸಕ್ಕೆ ಹೊನ್ನಮ್ಮನ ಹಳ್ಳದ ಸೇತುವೆ ಅಕ್ಕಪಕ್ಕ ಕುಸಿತ ಸಹ ಉಂಟಾಗಿದೆ.ದೇವಸ್ಥಾನದ ಒಂದು ಭಾಗ ಹಾಗೂ ಮಣ್ಣು ಕುಸಿತ ಉಂಟಾಗಿದೆ. ಮಣ್ಣು ಕುಸಿತದಿಂದ ಹೊನ್ನಮ್ಮ ಹಳ್ಳದಲ್ಲಿ ಸಾಕಷ್ಟು ಹಾನಿ ಸಹ ಉಂಟಾಗಿದೆ.