ಚಿತ್ರಕಲಾ ಪ್ರದರ್ಶನ

ಬೆಂಗಳೂರು

ಬೆಂಗಳೂರಿನ ಚಿತ್ರ ಕಲಾ ಪರಿಷತ್ ನಲ್ಲಿ ವಿಶಿಷ್ಠ ಚಿತ್ರಕಲಾ ಪ್ರದರ್ಶನ ಆರಂಭಗೊಂಡಿದೆ.  ಪವಿತ್ರ ವಸ್ತ್ರ ಅಭಿಯಾ, ಪ್ರಸನ್ನ ಹಾಗೂ ನಿರಂಜನ ಅವರ ಎಸ್ಥೆಟಿಕ್ಸ್ ಆಫ್ ಸಿಂಪ್ಲೆಸಿಟಿ ಚಿತ್ರಕಲಾ ಪ್ರದರ್ಶನ ಇದಾಗಿದೆ. ಖ್ಯಾತ ಹಿರಿಯ ನಿರ್ದೇಶಕ ಎಂ ಎಸ್ ಸತ್ಯು ಇದರಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿ ಅವರು, ಈ ಪ್ರದರ್ಶನಕ್ಕ ಮೆಚ್ಚಿಗೆ ವ್ಯಕ್ತಪಡಿಸಿದರು, ಪ್ರೋತ್ಸಾಹಿಸಿದರು. ಪ್ರತಿಯೊಬ್ಬರೂ ಒಮ್ಮೆ ಭೇಟಿ ಕೊಟ್ಟು ಅಪರೂಪದ ಕಲಾ ಪ್ರದರ್ಶನವನ್ನು ಕಣ್ತುಂಬಿಕೊಳ್ಳಬಹುದು.