ಎಲ್ಲೆಂದರಲ್ಲಿ ಕಸ ಹಾಕ್ತಿರಾ? ಪೌರಕಾರ್ಮಿಕರೇ ಕಲಿಸ್ತಾರೆ ಪಾಠ | Bengaluru |
ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದ ವ್ಯಕ್ತಿಯ ಮನೆ ಮುಂದೆ ಕಸದ ರಾಶಿ ಸುರಿದು ಇನ್ಮುಂದೆ ಈ ರೀತಿಯ ದುರ್ವರ್ತನೆ ತೋರದಂತೆ ಪೌರಕಾರ್ಮಿಕರು ಹಾಗೂ ಗ್ರಾಮದ ಸದಸ್ಯರು ತಕ್ಕಪಾಠ ಕಲಿಸಿದ್ದಾರೆ. ಹೌದು ಕಸದ ಗಾಡಿ ಜೊತೆಗೆ ಹೋಗಿ ವ್ಯಕ್ತಿಯ ಮನೆಯ ಮುಂದೆ ಕಸವನ್ನು ಸುರಿಯುವ ಮೂಲಕ ಆತನಿಗೆ ಶಾಕ್ ನೀಡಿದ್ದಾರೆ. ಈ ಘಟನೆ ಬೆಂಗಳೂರಿನ ಪೂರ್ವಕ್ಕೆ ಬರುವ ಮಂಡೂರಿನ ಗ್ರಾಮದ ಐಶ್ವರ್ಯ ಲೇಔಟ್ನಲ್ಲಿ ನಡೆದಿದೆ. ಕಸವನ್ನು ನೋಡಿದ ವ್ಯಕ್ತಿಯು ಸಾರ್ವಜನಿಕರು ಹಾಗೂ ಗ್ರಾಮ ಪಂಚಾಯತಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಸಿದ್ದಾನೆ. ಇದೇ ವೇಳೆ ಈ ರೀತಿಯ ಕೆಟ್ಟ ವರ್ತನೆ ತೋರದಂತೆ ಎಚ್ಚರಿಕೆ ನೀಡಲಾಯಿತು ಎಂದು ಮಂಡೂರಿನ ಮೂಲಗಳು ತಿಳಿಸಿವೆ. ಆದರೂ ಸ್ಥಳೀಯರು ಆತನ ಮಾತಿಗೆ ಜಗ್ಗದೇ ರಸ್ತೆಯಲ್ಲಿ ಕಸ ಹಾಕ್ತಿದ್ದ ವ್ಯಕ್ತಿ ಮನೆ ಮುಂದೆ ಕಸ ಹಾಕಿ ಆತನಿಗೆ ವಾರ್ನ್ ಮಾಡುವ ಮೂಲಕ ಪಾಠ ಕಳಿಸಿದ್ದಾರೆ. ಅಂದಹಾಗೆ ಈತನಿಗೆ ಸಾಕಷ್ಟು ಬಾರಿ ಸಾರ್ವಜನಿಕರು ಕಸದ ಹಾಕುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಈತ ಸಾರ್ವಜನಿರ ಜೊತೆಗೆ ಗಲಾಟೆ ಮಾಡಿದ್ದಾನೆ ಎಂದು ಮಂಡೂರಿನ ಮೂಲಗಳು ಹೇಳ್ತಿವೆ.