ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ನೀಡಿಲು ಪ್ರತಿಭಟನೆ...

ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ನೀಡಿಲು ಪ್ರತಿಭಟನೆ... ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಈಗಾಗಲೇ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಪ್ರಾಧ್ಯಾಪಕರೆಂದು ಪದೋನ್ನತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಯೂನಿವರ್ಸಿಟಿ ಕಾನ್ಸೂಟಿಟುವೆಂಟ್ ಕಾಲೇಜಿಸ್ ಟೀಚರ್ಸ್ ಅಸೋಸಿಯೇಶನ್ಸ್ ವತಿಯಿಂದ ಕರ್ನಾಟಕ ವಿಶ್ವವಿದ್ಯಾಲಯ ಆಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು. ಯುಜಿಸಿ ನಿಯಮಾವಳಿಗಳ ಪ್ರಕಾರ ಶೇ.10ರಷ್ಟು ಶಿಕ್ಷಕರಿಗೆ ಪ್ರಾಧ್ಯಾಪಕರೆಂದು ಪದೋನ್ನತಿ ನೀಡಲು ಅವಕಾಶವಿದೆ. ಆದರೆ, ಇಲ್ಲಿಯವರೆಗೂ ಪದೋನ್ನತಿ ಬಯಸಿ ಅರ್ಜಿ ಸಲ್ಲಿಸಿದ ಸಹಾಯ ಪ್ರಾಧ್ಯಾಪಕರಿಗೆ ಪದೋನ್ನತಿಯನ್ನೇ ನೀಡಿಲ್ಲ. ಕವಿವಿ ಅಧೀನದ ವಿವಿಧ ಮಹಾವಿದ್ಯಾಲಯಗಳಿಗೆ ಕಾಯಂ ಪ್ರಚಾರ್ಯರನ್ನು ನೇಮಕ ಮಾಡದೇ ಇರುವುದರಿಂದ ಆಡಳಿತಾತ್ಮಕವಾಗಿ ಹಾಗೂ ಶೈಕ್ಷಣಿಕವಾಗಿ ಕಾಲೇಜುಗಳು ಕುಂಠಿತಗೊಂಡಿದ್ದು ಇದರಿಂದ NACC ನೀಡುವ ಉನ್ನತಮಟ್ಟದ ಎ ಗ್ರೇಡ್‌ನಿಂದ ಕಾಲೇಜುಗಳು ಬಿ ಗ್ರೇಡ್‌ಗೆ ಕುಸಿತ ಕಂಡಿವೆ. ಸಹಾಯಕ ಪ್ರಾಧ್ಯಾಪಕರ ಅರ್ಜಿಗಳನ್ನು ಇಟ್ಟುಕೊಳ್ಳದೇ ಬಡ್ತಿ ನೀಡಬೇಕು ಹಾಗೂ ವಿವಿಧ ಕಾಲೇಜುಗಳಿಗೆ ಕಾಯಂ ಪ್ರಾಚಾರ್ಯರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಸಹಾಯಕ ಪ್ರಾಧ್ಯಾಪಕರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಡಾ.ಕೆ.ಎಸ್.ಕಟಗಿ, ಡಾ.ಕೆ ಕೊಟ್ರೇಶ್, ಡಾ.ರಾಜೇಶ್ವರಿ, ಡಾ. ಡೋರಿ ಸಿಂಗ್, ಪ್ರೋಪೆಸರ್ ಮಹದೇವಯ್ಯ, ಡಾ.ವಿ ಜಗದೀಶ್, ಡಾ.ಕೋಳುರು, ಡಾ.ಜಗದೀಶ್ ಕಲ್ಯಾಣ , ಡಾ.ನೀಲಗುಂದ ಭಾಗವಹಿಸಿದ್ದರು.