ಹುಮನಾಬಾದ್| ರಸ್ತೆ ಅಪಘಾತ: ಎಎಸ್‌ಐ ಸಾವು
ಹುಮನಾಬಾದ್: ಪಟ್ಟಣದ ಡಿವೈಎಸ್ಪಿ ಕಚೇರಿಯ ಎಎಸ್‌ಐ ಸುಭಾಷ್ ಮಡಿವಾಳ ( 55) ಮಂಗಳವಾರ ನಡೆದ ರಸ್ತೆ ಅ ಪಘಾತದಲ್ಲಿ ಮೃತ ಪಟ್ಟಿದ್ದಾರೆ.
ಕರ್ತವ್ಯದ ಮೇಲೆ ಪಟ್ಟಣದ ಹೊರವಲಯದ ಚಿದ್ರಿ ಬೈಪಾಸ್ ಹತ್ತಿರದ ಸಿ.ಸಿ ಕ್ಯಾಮೆರಾ ಪರಿಶೀಲಿಸಲು ತೆರಳುತ್ತಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ.
ಅವರಿಗೆ ಪತ್ನಿ ಹಾಗೂ ಮೂವರು ಪುತ್ರರು ಇದ್ದಾರೆ.
ಮೃತರ ಸ್ವಗ್ರಾಮ ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾದಲ್ಲಿ ಬುಧವಾರ (ಫೆ.15) ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಸಿಪಿಐ ಶರಣ ಬಸಪ್ಪ ಕೊಡ್ಲಾ ತಿಳಿಸಿದ್ದಾರೆ.