ಕೋವಿಡ್ ಹೊಸ ರೂಪಾಂತರಿ ವೈರಸ್ ಪತ್ತೆ; ವಿಶ್ವ ಆರೋಗ್ಯ ಸಂಸ್ಥೆಯಿಂದ ಎಚ್ಚರಿಕೆ

ಕೋವಿಡ್ ಹೊಸ ರೂಪಾಂತರಿ ವೈರಸ್ ಪತ್ತೆ; ವಿಶ್ವ ಆರೋಗ್ಯ ಸಂಸ್ಥೆಯಿಂದ ಎಚ್ಚರಿಕೆ

ವದೆಹಲಿ; ಕೊರೊನಾ ಸೋಂಕು ಕಡಿಮೆಯಾಗುತ್ತಿದೆ ಎಂದುಕೊಳ್ಳುತ್ತಿರುವಾಗಲೇ ಮತ್ತೊಂದು ರೂಪಾಂತರಿ ವೈರಸ್ ಪತ್ತೆಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ

ಕೋವಿಡ್ ನ ಹೊಸ ರೂಪಾಂತರಿ ತಳಿ XBB ಪತ್ತೆಯಾಗಿದ್ದು, ಇದು ಓಮಿಕ್ರಾನ್ ಸೋಂಕಿನ ಉಪತಳಿಯಾಗಿದೆ.

ಬ್ರಿಟನ್, ಅಮೆರಿಕ, ಸಿಂಗಾಪುರಗಳಲ್ಲಿ ಈ ರೂಪಾಂತರಿ ವೈರಸ್ ನಿಂದ ಕಳೆದೊಂದು ವಾರದಿಂದ ಹಲವು ಜನರು ಬಳಲುತ್ತಿದ್ದಾರೆ.

ಈ ಹಿನ್ನೆಲೆಯಲಿ XBB ವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮುಂಜಾಗೃತೆ ವಹಿಸುವಂತೆ ಸಂದೇಶ ರವಾನಿಸಿದೆ.