ರಷ್ಯಾ ದಾಳಿ ಬೆನ್ನಲ್ಲೇ ಉಕ್ರೇನ್‌ಗೆ ಸುಧಾರಿತ ವಾಯು ರಕ್ಷಣಾ ವ್ಯವಸ್ಥೆ ಭರವಸೆ ನೀಡಿದ ಬೈಡೆನ್

ರಷ್ಯಾ ದಾಳಿ ಬೆನ್ನಲ್ಲೇ ಉಕ್ರೇನ್‌ಗೆ ಸುಧಾರಿತ ವಾಯು ರಕ್ಷಣಾ ವ್ಯವಸ್ಥೆ ಭರವಸೆ ನೀಡಿದ ಬೈಡೆನ್

ವದೆಹಲಿ; ಅಕ್ಟೋಬರ್ 11: ರಷ್ಯಾದ ಕ್ಷಿಪಣಿಗಳ ದಾಳಿಯ ಬೆನ್ನಲ್ಲೇ ಜಗತ್ತಿನ 'ದೊಡ್ಡಣ್ಣ' ಯುನೈಟೆಡ್ ಸ್ಟೇಟ್ಸ್ ಉಕ್ರೇನ್ ನೆರವಿಗೆ ಧಾವಿಸಿದೆ. ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಇತರ ನಗರಗಳ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ್ದು, ಉಕ್ರೇನ್‌ಗೆ ಸುಧಾರಿತ ವಾಯು ರಕ್ಷಣಾ ವ್ಯವಸ್ಥೆಯನ್ನು ಒದಗಿಸುವುದಾಗಿ ಯುಎಸ್ ಅಧ್ಯಕ್ಷ ಜೋ ಬೈಡನ್ ಸೋಮವಾರ ಭರವಸೆ ನೀಡಿರುವ ಬಗ್ಗೆ ಶ್ವೇತಭವನದ ಹೇಳಿಕೆ ತಿಳಿಸಿದೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯೊಂದಿಗೆ ಮಾತನಾಡಿರುವ ಜೋ ಬೈಡೆನ್, "ಸುಧಾರಿತ ವಾಯು ರಕ್ಷಣಾ ವ್ಯವಸ್ಥೆಗಳು ಒಳಗೊಂಡಂತೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಗತ್ಯವಾದ ಬೆಂಬಲವನ್ನು ಉಕ್ರೇನ್‌ಗೆ

ಕಳೆದ ತಿಂಗಳಿನಲ್ಲಿ ನಡೆದ ದಾಳಿಯಲ್ಲಿ 11 ಜನರು ಮೃತಪಟ್ಟಿದ್ದು, ಮಾಸ್ಕೋ ಮತ್ತು ಕ್ರಿಮಿನ್ ಪರ್ಯಾಯ ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆಯು ಹಾನಿಯಾಗಿತ್ತು. ಇದಕ್ಕೆ ಪ್ರತೀಕಾರವಾಗಿ ಉಕ್ರೇನ್ ವಿರುದ್ಧ "ತೀವ್ರ" ದಾಳಿಗಳನ್ನು ಮುಂದುವರಿಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದರು.

ಅಮೆರಿಕದಿಂದ ಸುಧಾರಿತ ವಾಯು ರಕ್ಷಣೆ:

ಬೈಡೆನ್ ಅವರೊಂದಿಗೆ ಮಾತನಾಡಿದ ನಂತರ, ಝೆಲೆನ್ಸ್ಕಿ "ನಮ್ಮ ರಕ್ಷಣಾ ಸಹಕಾರದಲ್ಲಿ ಪ್ರಸ್ತುತ ವಾಯು ರಕ್ಷಣೆಯು ಪ್ರಥಮ ಆದ್ಯತೆಯಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ. ರಷ್ಯಾದ ಪಡೆಗಳು ದೇಶಾದ್ಯಂತ ಹಲವು ನಗರಗಳ ಮೇಲೆ 80ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿವೆ. ನೆರೆಯ ಬೆಲಾರಸ್‌ನಿಂದ ಉಡಾವಣೆಯಾದ ಇರಾನ್ ಡ್ರೋನ್‌ಗಳನ್ನು ಸಹ ರಷ್ಯಾ ಬಳಸಿದೆ ಎಂದು ಕೀವ್ ಹೇಳಿದರು.

ಜೋ ಬೈಡೆನ್ ಸಂತಾಪ:

ಉಕ್ರೇನ್ ನಗರಗಳ ಮೇಲೆ ರಷ್ಯಾ ನಡೆಸಿರುವ ದಾಳಿಯಲ್ಲಿ ಸಾವನ್ನಪ್ಪಿದ ಮತ್ತು ಗಾಯಗೊಂಡವರ ಪ್ರೀತಿಪಾತ್ರರಿಗೆ ಯುಎಸ್ ಅಧ್ಯಕ್ಷ ಜೋ ಬೈಡೆನ್ ಸಂತಾಪವನ್ನು ತಿಳಿಸಿದ್ದಾರೆ" ಎಂದು ಶ್ವೇತಭವನ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಇದರ ಜೊತೆಗೆ "ರಷ್ಯಾದ ಮೇಲೆ ವೆಚ್ಚವನ್ನು ಹೇರುವುದನ್ನು ಮುಂದುವರಿಸಲು ಮತ್ತು ಅದರ ಯುದ್ಧಾಪರಾಧಗಳು ಮತ್ತು ದೌರ್ಜನ್ಯಗಳಿಗೆ ರಷ್ಯಾವನ್ನು ಹೊಣೆಗಾರರನ್ನಾಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಮಿತ್ರರಾಷ್ಟ್ರಗಳು ಮತ್ತು ಪಾಲುದಾರರೊಂದಿಗೆ ಚರ್ಚೆ ನಡೆಸುತ್ತಿರುವುದರ ಬಗ್ಗೆ ಜೋ ಬೈಡೆನ್ ಒತ್ತಿ ಹೇಳಿದ್ದಾರೆ.

ನೀಡುವುದನ್ನು ಮುಂದುವರಿಸುವುದಾಗಿ ವಾಗ್ದಾನ ಮಾಡಿದರು," ಎಂದು ಹೇಳಿಕೆ ತಿಳಿಸಿದೆ.