ಮಾ.13ರಿಂದ ಹುಬ್ಬಳ್ಳಿ - ಪುಣೆ ನಡುವೆ ವಿಮಾನ ಸಂಚಾರ ಆರಂಭ
ಹುಬ್ಬಳ್ಳಿ: ಮಾರ್ಚ್ 13ರಿಂದ ಪ್ರತಿದಿನ ಹುಬ್ಬಳ್ಳಿ ಹಾಗೂ ಪುಣೆ ನಡುವೆ ನೇರ ವಿಮಾನ ಸೇವೆ ಪ್ರಾರಂಭವಾಗಲಿದೆ.
ಈ ಕುರಿತಂತೆ ಮಾಹಿತಿ ನೀಡಿರುವಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾರ್ಚ್ 13ರಿಂದ ಇಂಡಿಗೋ ಸಂಸ್ಥೆಯಿಂದ ಹುಬ್ಬಳ್ಳಿ-ಪುಣೆ ನಡುವೆ ನೇರ ವಿಮಾನ ಸಂಚಾರ ಆರಂಭಿಸಲಿದೆ.
ಮಾ.13ರಿಂದ ಪ್ರತಿದಿನ 6ಇ 7727 ವಿಮಾನವು ಹುಬ್ಬಳ್ಳಿಯಿಂದ ಸಂಜೆ 6.30 ಗಂಟೆಗೆ ಹೊರಟು, ಪುಣೆಗೆ 7.35ಕ್ಕೆ ತಲುಪಲಿದೆ. ಪುಣೆಯಿಂದ 8 ಗಂಟೆಗೆ ಹೊರಟು, ಹುಬ್ಬಳ್ಳಿಯನ್ನು ರಾತ್ರಿ 9.05ಕ್ಕೆ ತಲುಪಲಿದೆ.
ಹುಬ್ಬಳ್ಳಿಯಿಂದ ಪುಣೆಗೆ ನಿತ್ಯ ವಿಮಾನ ಸೇವೆ ಕಲ್ಪಿಸಲು ನೆರವು ನೀಡಿದಂತ ಕೇಂದ್ರ ಸಚಿವ ರಾಜನಾಥ ಸಿಂಗ್ ಹಾಗೂ ಕೇಂದ್ರ ನಾಗರೀಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೃತಜ್ಞತೆ ಸಲ್ಲಿಸಿದ್ದಾರೆ.