ಮತ್ತೆ ಚಿರತೆ ಹಳೇ ಜಾಗವಾದ ಕವಲಗೇರಿಗೆ ಎಂಟ್ರಿ
ಕಳೆದ ಮೂರು ದಿನಗಳಿಂದ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ಚಿರತೆ ಸೆರೆಹಿಡಿಯಲು ಅಗಲು ರಾತ್ರಿ ಅನ್ನದೆ ಅರಣ್ಯ ಅಧಿಕಾರಗಳು ಕಾರ್ಯಚರಣೆ ನಡೆಸಿದ್ರು. ಕೂಡಾ ಮತ್ತೆ ನಿನ್ನೆ ರಾತ್ರಿ ಗೋವನಕೊಪ್ಪ ಗ್ರಾಮದ ಹೊಲಗಳಲ್ಲಿ ಚಿರತೆ ನೋಡಿ ಗ್ರಾಮಸ್ಥರು ಬೆಚ್ಚಿಬೆರಗಾಗಿದ್ದಾರೆ. ಇನ್ನಿನ್ನೂ ಚಿರೆತೆ ಗೋವನಕೊಪ್ಪ ಮಾವಿನ ತೋಟಕ್ಕೆ, ಕಬ್ಬಿಣ ಕದ್ದಿಯಲ್ಲಿ ಬಂದಿದೆ ಎನ್ನುವ ಮಾಹಿತಿ ಬೆನ್ನಲ್ಲೇ ಮತ್ತೆ ವಾಪಸು ಚಿರತೆ ಗೋವನಕೊಪ್ಪ ಗ್ರಾಮಕ್ಕೆ ಹೋಗಿದೆ ಎನ್ನುವ ಮಾಹಿತಿ ಕೂಡಾ ಅಧಿಕಾರಿಗಳಿಂದ ಬಂದಿದೆ. ಅಲ್ಲದೆ ಕವಲಗೇರಿ ಖಾಯಂ ರಹವಾಸಿಯಾದ ಬಸಮ್ಮ ಮಾದರ ಗ್ರಾಮ ಪಂಚಾಯತ ಮಾಜಿ ಸದಸ್ಯರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿ ಸ್ಥಳದಲ್ಲಿದಲ್ಲಿ ಹಾಜರ ಇದ್ದು, ಮತ್ತೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.