ಹಿಜಾಬ್ ಧರಿಸದೇ 46 ವಿದ್ಯಾರ್ಥಿನಿಯರು ʼ ಉಪ್ಪಿನಂಗಡಿ ಕಾಲೇಜಿಗೆ ಹಾಜರು

ಹಿಜಾಬ್ ಧರಿಸದೇ 46 ವಿದ್ಯಾರ್ಥಿನಿಯರು ʼ ಉಪ್ಪಿನಂಗಡಿ ಕಾಲೇಜಿಗೆ ಹಾಜರು

ದಕ್ಷಿಣಕನ್ನಡ : ಉಪ್ಪಿನಂಗಡಿ ಸರ್ಕಾರಿ ಕಾಲೇಜು ಹಿಜಾಬ್‌ ವಿವಾದಕ್ಕೆ ಇಂದು ಸುಖ್ಯಾಂತ ಕಂಡಿದೆ. ವಿದ್ಯಾರ್ಥಿನಿಯರ ಹಿಜಾಬ್‌ ಹಾಕೋದಕ್ಕೆ ಪಟ್ಟು ಸಡಿಕೆಯಾಗಿದೆ. ವಾರದ ಹಿಂದೆ ಅಮಾನತ್ತಾಗಿದ್ದ 6 ವಿದ್ಯಾರ್ಥಿಗಳೂ ಹಿಜಾಬ್‌ ಕಳಚಿ ತರಗತಿಗೆ ಹಾಜರಾಗಿದ್ದು, ಸದ್ಯ ಒಂದು ವಾರ ತರಗತಿ 24 ವಿದ್ಯಾರ್ಥಿನಿಯರು ನಿರ್ಬಧಕ್ಕೆ ಒಳಗಾಗಿದ್ದು, ಅವಧಿ ಮುಗಿದ ಬಳಿಕ ಸೋಮವಾರ ತರಗತಿಗೆ ಹಾಜರಾಗುವ ಸಾಧ್ಯತೆಯಿದೆ.

ಸದ್ಯ ಹಿಜಾಬ್‌ ಹಠ ಬಿಟ್ಟು ಇಂದು 46 ವಿದ್ಯಾರ್ಥಿನಿಯರು ಹಿಜಾಬ್‌ ಧರಿಸದೇ ಹಾಜರಾಗಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸರ್ಕಾರಿ ಕಾಲೇಜಿನಲ್ಲಿ ಜಿಲ್ಲೆಯ 101 ಮುಸ್ಲಿಂ ವಿದ್ಯಾರ್ಥಿನಿಯರು ಇದ್ದಾರೆ. ಕಾಲೇಜಿನ ಅಡಳಿತದ ಸಸ್ಪೆಂಡ್‌ ಬಳಿಕ ವಿದ್ಯಾರ್ಥಿನಿಗಳು ಎಚ್ಚೆತ್ತುಕೊಂಡಿದ್ದಾರೆ.