ಮದುವೆ ಆಗಲು ನಿರಾಕರಿಸಿದ್ದಕ್ಕೆ 18 ಬಾರಿ ಇರಿದ ಪಾಗಲ್ ಪ್ರೇಮಿ!
ಮದುವೆ ಆಗಲು ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಪ್ರೇಯಸಿಗೆ 18 ಬಾರಿ ಇರಿದ ಆಘಾತಕಾರಿ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಎಲ್ ಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಸ್ತಿನಾಪುರಂನ ಕೋಣೆಯೊಂದರಲ್ಲಿ ಯುವತಿ ಇದ್ದಾಗ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸವರಾಜ್ ಎಂಬಾತ ಶ್ರೀಷಾ ಎಂಬ ಯುವತಿಯನ್ನು ಹತ್ಯೆಗೈದಿದ್ದಾನೆ. ಇಬ್ಬರೂ ವಿಕ್ರಾಬಾದ್ ಜಿಲ್ಲೆಯ ನಿವಾಸಿಗಳು ಎಂದು ಹೇಳಲಾಗಿದೆ.
ಯುವತಿಗೆ 2 ತಿಂಗಳ ಹಿಂದೆಯಷ್ಟೇ ಶ್ರೀಧರ್ ಎಂಬಾತನ ಜೊತೆ ನಿಶ್ಚಿತಾರ್ಥ ಆಗಿತ್ತು. ಇದರಿಂದ ಸಿಟ್ಟಿಗೆದ್ದ ಬಸವರಾಜ್ ಆಕೆಯನ್ನು ಹತ್ಯೆ ಮಾಡಿದ್ದಾನೆ.
ಯುವತಿ ಜೊತೆ ಬಸವರಾಜ್ ಮೊದಲಿನಿಂದಲೇ ಸಂಬಂಧ ಹೊಂದಿದ್ದು, ದಿಢೀರನೆ ಆಕೆ ಮದುವೆ ಆಗಲು ನಿರಾಕರಿಸಿ ಮತ್ತೊಬ್ಬನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರಿಂದ ಬಸವರಾಜ್ ಅಸಮಾಧಾನಗೊಂಡಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.