ಸುನಿಲ್ ಕುಮಾರ್ ಎಲ್ಲಿದ್ರೂ? ಈಗ ಎಲ್ಲಿ ತಲುಪಿದ್ದಾರೆ?: ಪ್ರಮೋದ್ ಮುತಾಲಿಕ್ ಪ್ರಶ್ನೆ

ಉತ್ತರಕನ್ನಡ:ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ಹೀಗಾಗಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪ್ರಮೋದ್ ಮುತಾಲಿಕ್ ಹೇಳಿದ್ದರು. ಈ ಕುರಿತು ರಾಜಕೀಯ ನಾಯಕರ ಆರೋಪ ಸಾಕಷ್ಟು ಕೇಳಿಬಂದಿತ್ತು.
ದುಡ್ಡೇ ಗಳಿಸಬೇಕಾಗಿದ್ರೆ ನಂಗೆ 45 ವರ್ಷ ಬೇಕಿರಲಿಲ್ಲ ಎಂದರು. ಸುನೀಲ್ ಕುಮಾರ್ ಆರೋಪಕ್ಕೆ ಈ ಹೇಳಿಕೆಯೇ ಸಾಕ್ಷಿಯಾಗಿದೆ. ಸುನಿಲ್ ಕುಮಾರ್ ಎಲ್ಲಿದ್ರೂ? ಈಗ ಎಲ್ಲಿ ತಲುಪಿದ್ದಾರೆ? ಎಂದು ಪ್ರಮೋದ್ ಮುತಾಲಿಕ್ ಪ್ರಶ್ನೆ ಮಾಡಿದ್ದಾರೆ. ಕಾರ್ಯಕರ್ತರ ಓಡಾಟಕ್ಕೆ ನೂರು ರೂಪಾಯಿ ಕೇಳಿದ್ದೇನೆ ಢೋಂಗಿ ಹಿಂದೂವಾದ ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸಬೇಕಿದೆ. ಅಸಲಿ ಹಿಂದುತ್ವ ತೋರಿಸಲು ಕಾರ್ಕಳಕ್ಕೆ ಬಂದಿದ್ದೇನೆ ಎಂದರು.