ಆಯನೂರು: ಹಾಲು ಸರಬರಾಜು ವಾಹನ ಮರಕ್ಕೆ ಢಿಕ್ಕಿ; ಓರ್ವ ಗಂಭೀರ

ಶಿವಮೊಗ್ಗ, ಆ.23: ಹಾಲು ಸರಬರಾಜು ವಾಹನ ಮರಕ್ಕೆ ಢಿಕ್ಕಿಯಾಗಿ, ಕ್ಲೀನರ್ ಗಂಭೀರ ಗಾಯಗೊಂಡ ಘಟನೆ ಆಯನೂರು ಸಮೀಪದ ಚೌಡೇಶ್ವರಿ ದೇವಸ್ಥಾನದ ಬಳಿ ರವಿವಾರ ರಾತ್ರಿ ಸಂಭವಿಸಿರುವುದು ವರದಿಯಾಗಿದೆ.
ಸಂತೋಷ್ ಗಾಯಗೊಂಡಿರುವ ಕ್ಲೀನರ್. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಮತ್ತು ಸಾರ್ವಜನಿಕರ ನೆರವಿನಿಂದ ಸಂತೋಷ್ ರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗದಿಂದ ಸಾಗರದ ಕಡೆಗೆ ಸಂಚರಿಸುತ್ತಿದ್ದ ಹಾಲು ಸರಬರಾಜು ಮಾಡುವ ಲಾರಿ ಆಯನೂರುನಿಂದ ಸ್ವಲ್ಪ ಮುಂದೆ ಚೌಡೇಶ್ವರಿ ದೇಗುಲದ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಮರಕ್ಕೆ ಢಿಕ್ಕಿ ಹೊಡೆದಿದೆ.
ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಈ ಬಗ್ಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.