ಬ್ಯಾಂಕ್ ಗ್ರಾಹಕರೇ ಗಮನಿಸಿ : ಇಲ್ಲಿದೆ ಮಾರ್ಚ್ ತಿಂಗಳ ಬ್ಯಾಂಕ್ ರಜೆ ದಿನಗಳ ಪಟ್ಟಿ
ನವದೆಹಲಿ : 2023ರ ಮೂರನೇ ತಿಂಗಳು ಮಾರ್ಚ್. ಆರ್ ಬಿಐ ಬಿಡುಗಡೆ ಮಾಡಿದ ಮಾರ್ಚ್ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳ ಪ್ರಕಾರ, ಈ ತಿಂಗಳು ಒಟ್ಟು 9 ದಿನಗಳ ವರೆಗೆ ಬ್ಯಾಂಕುಗಳು ಮುಚ್ಚಿರುತ್ತವೆ. ಆದಾಗ್ಯೂ, ಈ ರಜಾದಿನಗಳು ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರದ ರಜಾದಿನಗಳನ್ನು ಸಹ ಒಳಗೊಂಡಿವೆ.
ಆರ್ ಬಿಐ ಮಾರ್ಚ್ ತಿಂಗಳ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾರ್ಚ್ ತಿಂಗಳಲ್ಲಿ, ಹೋಳಿ, ಯುಗಾದಿ ಹಬ್ಬ ಸೇರಿದಂತೆ ಕೆಲವು ರಜಾದಿನಗಳನ್ನು ಸಹ ಹೊಂದಿದೆ.
2023 ರ ಮಾರ್ಚ್ ತಿಂಗಳ ರಜಾ ದಿನಗಳ ಪಟ್ಟಿ
ಮಾರ್ಚ್-5 ಭಾನುವಾರ (ವಾರದ ರಜೆ)
ಮಾರ್ಚ್- 8 ಬುಧವಾರ- ಹೋಳಿ
ಮಾರ್ಚ್ 11 ಎರಡನೇ ಶನಿವಾರ
ಮಾರ್ಚ್ 12- ಭಾನುವಾರ (ವಾರದ ರಜೆ)
ಮಾರ್ಚ್ 19-ಭಾನುವಾರ (ವಾರದ ರಜೆ)
ಮಾರ್ಚ್ 22 ಬುಧವಾರ- ಯುಗಾದಿ
ಮಾರ್ಚ್ 25 ಎರಡನೇ ಶನಿವಾರ
ಮಾರ್ಚ್ 26-ಭಾನುವಾರ (ವಾರದ ರಜೆ)
ಮಾರ್ಚ್ 30, 2023, ಗುರುವಾರ- ರಾಮ ನವಮಿ