ಪ್ರೀತಿಸಿ ಮದ್ವೆಯಾದ ಪತ್ನಿಯನ್ನ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಗಂಡ

ಪ್ರೀತಿಸಿ ಮದ್ವೆಯಾದ ಪತ್ನಿಯನ್ನ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಗಂಡ
ತ್ನಿ (Wife) ಮೇಲಿನ ಅನುಮಾನ ವಿಕೋಪಕ್ಕೆ ತಿರುಗಿ ಸಾವಿನಲ್ಲಿ ಅಂತ್ಯಗೊಂಡಿದೆ. ಆತ್ಮಹತ್ಯೆಗೆ ಯತ್ನಿಸಿರುವ ಪತಿಯ (Husband Health) ಸ್ಥಿತಿಯು ಗಂಭೀರವಾಗಿದ್ದು, ಮಕ್ಕಳು ಅನಾಥವಾಗಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ಈ ಘಟನೆ ನಡೆದಿದೆ.
ಪತ್ನಿಗೆ ಚಾಕುವಿನಿಂದ ಇರಿದು ಕಲ್ಲಿನಿಂದ ಹಲ್ಲೆ ನಡೆಸಿ ತಾನು ಆತ್ಮಹತ್ಯೆಗೆ ಯತ್ನಿಸಿದ್ದನು. ಚಿಕಿತ್ಸೆ ಫಲಕಾರಿಯಾಗದೇ ಪತ್ನಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಆತ್ಮಹತ್ಯೆಗೆ ಯತ್ನಿಸಿರುವ ಪತಿಯ ಸ್ಥಿತಿ ಸಹ ಗಂಭೀರವಾಗಿದೆ. ಹೊಸಕೋಟೆ ಮೂಲದ ರಮೇಶ್ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿ ಪತ್ನಿ ಅರ್ಪಿತಾ ಮೇಲೆ ಚಾಕು ಮತ್ತು ಕಲ್ಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ತಾನು ಕೂಡ ಚಾಕುವಿನಿಂದ ಇರಿದು ಆತ್ಮಹತ್ಯೆಗೆ ಯತ್ನಿಸಿದ್ದನು.

ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸೂಲಿಬೆಲೆ ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿ ಇಬ್ಬರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಭಾನುವಾರ ಚಿಕಿತ್ಸೆ ಫಲಕಾರಿಯಾಗದೇ ಪತ್ನಿ ಅರ್ಪಿತಾ ಸಾವನ್ನಪ್ಪಿದ್ದು, ಪತಿ ಸ್ಥಿತಿ ಚಿಂತಾಜನಕವಾಗಿದೆ.

ಪ್ರೀತಿಸಿ ಮದುವೆಯಾಗಿದ್ದ ರಮೇಶ್ ಮತ್ತು ಅರ್ಪಿತಾ

ಏಳು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ರಮೇಶ್ ಮತ್ತು ಅರ್ಪಿತಾ ಸಾಂಸಾರಿಕ ಜೀವನ ಚೆನ್ನಾಗಿತ್ತು. ಒಂದು ಹೆಣ್ಣು ಮತ್ತು ಗಂಡು ಸಹ ದಂಪತಿಗೆ ಜನಿಸಿದ್ದು, ನೆಮ್ಮದಿಯ ಜೀವನ ನಡೆಸುತ್ತಿದ್ದರು .

ಮೊದ ಮೊದಲು ಸಣ್ಣ ಪುಟ್ಟ ಕ್ರೈಂ ಮಾಡುತ್ತಿದ್ದ ರಮೇಶ್ ಆನೇಕಲ್ ತಾಲ್ಲೂಕಿನಲ್ಲಿ ಎಟಿಎಂ ದೋಚಿ ಪ್ರವರ್ಧಮಾನಕ್ಕೆ ಬಂದಿದ್ದ, ಹೊಸಕೋಟೆ ಠಾಣೆ ವ್ಯಾಪ್ತಿಯಲ್ಲಿ ಸುಲಿಗೆ, ರಾಬರಿ ಪ್ರಕರಣಗಳಲ್ಲಿ ಭಾಗಿಯಾದ ಹಿನ್ನೆಲೆ ರೌಡಿ ಶೀಟ್ ತೆರೆದಿದ್ದರು.

ಸಂಸಾರದಲ್ಲಿ ಬಿರುಕು

ಈ ನಡುವೆ ರಮೇಶ್ ಮತ್ತು ಅರ್ಪಿತಾ ಸಂಸಾರದಲ್ಲಿ ಬಿರುಕು ಮೂಡಿತ್ತು. ಪತ್ನಿ ಮೇಲೆ ಅನುಮಾನಪಡುತ್ತಿದ್ದ ರಮೇಶ್ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದ ಎನ್ನಲಾಗಿದೆ. ಸಾಕಷ್ಟು ಬಾರಿ ದಂಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.ಮಾರಣಾಂತಿಕ ಹಲ್ಲೆ ನಡೆಸಿ, ಆತ್ಮಹತ್ಯೆಗೆ ಯತ್ನ

ಆದರೂ ಇಬ್ಬರಿಗೂ ಹೊಂದಾಣಿಕೆಯಾಗದ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ಬೇರೆ‌ ಬೇರೆಯಾಗಿ ವಾಸವಿದ್ದರು. ಎರಡು‌ ದಿನಗಳ ಹಿಂದೆ ಪತ್ನಿ ಮಕ್ಕಳನ್ನ ನೋಡಬೇಕು ಅಂತ ಬಂದಿದ್ದ ಪತಿ ರಮೇಶ್ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶಕ್ಕೆ ಪತ್ನಿಯನ್ನು ಕರೆದೊಯ್ದು ಹಲ್ಲೆ ನಡೆಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.ಹಲ್ಲೆಯ ದೃಶ್ಯ ಮೊಬೈಲ್​​ನಲ್ಲಿ ಸೆರೆ

ರಾಕ್ಷಸನಂತೆ ಪತ್ನಿಗೆ ಅಮಾನುಷವಾಗಿ ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದು, ನೋಡುಗರನ್ನ ಬೆಚ್ಚಿ‌ ಬೀಳಿಸಿದೆ . ಪತ್ನಿ ಮೇಲಿನ ಹಲ್ಲೆಯ ಭೀಕರ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ‌ಸೆರೆಯಾಗಿದ್ದು , ನೋಡುಗರ ಎದೆ ಬಡಿತವನ್ನು ಹೆಚ್ಚಿಸಿದೆ.
ಪತಿಯ ಹುಚ್ಚಾಟಕ್ಕೆ ಪತ್ನಿ ಅಸುನೀಗಿದ್ದು, ಮುದ್ದಾದ ಇಬ್ಬರು ಮಕ್ಕಳು ಅನಾಥವಾಗಿದ್ದಾರೆ . ಘಟನೆ ಸಂಬಂಧ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೆರೆಯಲ್ಲಿ ಮುಳುಗಿ ಬಾಲಕ ಸಾವು

ಕೆರೆ ತುಂಬಿದ್ದ ಖುಷಿಯಲ್ಲಿ ನೋಡಲು ಹೋಗಿ ಕಾಲು ಜಾರಿ ಬಿದ್ದು ಬಾಲಕ ಸಾವನ್ನಪ್ಪಿರೋ ಘಟನೆ ರಾಮನಗರ ಜಿಲ್ಲೆ ಮಾಗಡಿ  ತಾಲೂಕಿನ ಚಿಕ್ಕಹಳ್ಳಿಯಲ್ಲಿ ನಡೆದಿದೆ. 24 ವರ್ಷಗಳ ಬಳಿಕ ಗ್ರಾಮದ ಕೆರೆ ಕೋಡಿ ಬಿದ್ದಿತ್ತು. ಸ್ನೇಹಿತನ ಜೊತೆ 17 ವರ್ಷದ ಸಮೀರ್, ಕೆರೆ ನೋಡಲು ತೆರಳಿದ್ದನು.