ಐಕ್ಯತಾ ದಿನ: ಅರೆ ಸೇನಾ ಪಡೆ ಭಾಗಿಯಾಗಲು ಸೂಚನೆ

ಐಕ್ಯತಾ ದಿನ: ಅರೆ ಸೇನಾ ಪಡೆ ಭಾಗಿಯಾಗಲು ಸೂಚನೆ

ವದೆಹಲಿ: ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರ ಜನ್ಮದಿನದ ಅಂಗವಾಗಿ ಅ.31ರಂದು ರಾಷ್ಟ್ರೀಯ ಐಕ್ಯತಾ ದಿನದ ಪ್ರಯುಕ್ತ ದೇಶದ ಪ್ರತಿ ಜಿಲ್ಲೆಗಳಲ್ಲಿ ಕೇಂದ್ರೀಯ ಅರೆಸೇನಾ ಪಡೆಗಳನ್ನು ಒಳಗೊಂಡ ಬೃಹತ್‌ ಸಮಾರಂಭ ಏರ್ಪಡಿಸಲು ಕೇಂದ್ರ ಸರ್ಕಾರ ಯೋಜಿಸಿದೆ.

ಈ ಕುರಿತು ಎಲ್ಲ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪತ್ರ ಬರೆದಿದ್ದು, ದೇಶದ 750 ಜಿಲ್ಲೆಗಳಲ್ಲಿ ಐಕ್ಯತಾ ಓಟ ಆಯೋಜಿಸಬೇಕು ಎಂದು ಸಲಹೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ನಾಗರಿಕರು ಐಕ್ಯತಾ ಪ್ರತಿಜ್ಞೆಯನ್ನೂ ಸ್ವೀಕರಿಸಲಿದ್ದಾರೆ.

ಅದೇ ದಿನ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರ ಬೃಹತ್‌ ಪ್ರತಿಮೆ ಇರುವ ಗುಜರಾತ್‌ನ ಕೆವಡಿಯಾದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅಕಾಡೆಮಿಯಲ್ಲಿ ಆಯೋಜಿಸುವ ಬೃಹತ್‌ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಗರಿಕ ಸೇವಾ ತರಬೇತಿ ಪಡೆಯುತ್ತಿರುವ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.