ಅನಿವಾರ್ಯ ಕಾರಣಗಳಿಂದ ನಾನು,ಸಿದ್ದರಾಮಯ್ಯ ಬಾದಾಮಿ ಕ್ಷೇತ್ರ ಬಿಟ್ಟಿದ್ದೇವೆ : ಸಚಿವ ಶ್ರೀರಾಮುಲು ಹೇಳಿಕೆ
ಬಳ್ಳಾರಿ : ಚುನಾವಣೆ ಸಮೀಪಸುತ್ತಿರುವ ಹೊತ್ತಲ್ಲೇ ಸಾರಿಗೆ ಸಚಿವ ಶ್ರೀರಾಮುಲು ಅವರು ಮಾಜಿ ಸಿಎಂ ಸಿದ್ದರಾಮಯ್ಯ ಕುರಿತು ಸಾಫ್ಟ್ ಕಾರ್ನರ್ ವ್ಯಕ್ತಪಡಿಸಿದ್ದು, ನಾನು ಮತ್ತು ಸಿದ್ದರಾಮಯ್ಯ ಅನಿವಾರ್ಯ ಕಾರಣಗಳಿಂದ ಬಾದಾಮಿ ಕ್ಷೇತ್ರವನ್ನು ಬಿಟ್ಟಿದ್ದೇವೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು, ಅನಿವಾರ್ಯ ಕಾರಣಕ್ಕೆ ಸಿದ್ದರಾಮಯ್ಯ ಮತ್ತು ನಾನು ಬಾದಾಮಿ ಕ್ಷೇತ್ರವನ್ನು ಬಿಟ್ಟಿದ್ದೇವೆ. ರಾಜ್ಯ, ರಾಷ್ಟ್ರೀಯ ನಾಯಕರ ನಿರ್ಧಾರದಂತೆ ನಾವು ಬಾದಾಮಿ ಕ್ಷೇತ್ರವನ್ನು ಬಿಟ್ಟಿದ್ದೇವೆ. ಸರ್ಕಾರ ರಚನೆಗಾಗಿ ಹೆಸರಿಸಿರುವ ಅಭ್ಯರ್ಥಿಗಳು ಬೇರೆಡೆ ನಿಲ್ಲಬೇಕು. ನಾನು ಮತ್ತು ಸಿದ್ದರಾಮಯ್ಯ ಸ್ವಾರ್ಥಕ್ಕಾಗಿ ಕ್ಷೇತ್ರವನ್ನು ಬಿಟ್ಟಿಲ್ಲ. ಸರ್ಕಾರ ರಚನೆಗಾಗಿ ನಾವಿಬ್ಬರು ಕ್ಷೇತ್ರ ಬಿಟ್ಟಿದ್ದೇವೆ ಎಂದು ಹೇಳಿದ್ದಾರೆ.