ಯುಕ್ರೇನ್ ಮೇಲೆ ಪರೊಕ್ಷ ದಾಳಿ ನಡೆಸುತ್ತಿದೆ ಅಮೆರಿಕ! ಹಿಂದೆ ಮಾಡಿದ್ದು ಈಗ ಉಲ್ಟಾ ಹೊಡೆಯುತ್ತಿದೆಯಾ?

ಯುಕ್ರೇನ್ ಮೇಲೆ ಪರೊಕ್ಷ ದಾಳಿ ನಡೆಸುತ್ತಿದೆ ಅಮೆರಿಕ! ಹಿಂದೆ ಮಾಡಿದ್ದು ಈಗ ಉಲ್ಟಾ ಹೊಡೆಯುತ್ತಿದೆಯಾ?

ವದೆಹಲಿ: ಹಿಂದೆ ಮಾಡಿದ ಕೆಲಸ ಅಮೆರಿಕಗೆ ಉಲ್ಟಾ ಹೊಡೆಯುತ್ತಿದೆ. ಹೌದು, ಅಮೆರಿಕ ತರಬೇತುಗೊಳಿಸಿದ್ದ ಆಫ್ಗನ್​ ಸೈನಿಕರನ್ನು ಈಗ ರಷ್ಯಾ ಯುದ್ಧದಲ್ಲಿ ಬಳಸಿಕೊಳ್ಳುತ್ತಿದೆ.

ಹಿಂದೆ ತಾಲಿಬಾನ್ ವಿರುದ್ಧ ಹೋರಾಡಲು ಅಫ್ಗಾನಿಸ್ತಾನದ ಸೈನಿಕರನ್ನು ಅಮೆರಿಕ ಹಾಗು ಬ್ರಿಟನ್​ ಜಂಟಿಯಾಗಿ ತರಬೇತುಗೊಳಿಸಿದ್ದರು.

ಆದರೆ ಅಮೆರಿಕ ಅಫ್ಘಾನಿಸ್ತಾನದಿಂದ ಹಿಂತಿರುಗಿದ ಮೇಲೆ ಆ ಸೈನಿಕರು ನಿರುದ್ಯೋಗಿಗಳಾದರು. ಅಮೆರಿಕನ್ನರು ಬಿಟ್ಟು ಹೋಗುವಾಗ ಸುಮಾರು 30,000 ಅಫ್ಘಾನ್​ ಸೈನಿಕರು ಸೇವೆಯಲ್ಲಿದ್ದರು. ಕೆಲವರು ದೇಶ ಬಿಟ್ಟು ಹೋದರೂ ಅನೇಕರಿಗೆ ಇದು ಸಾಧ್ಯವಾಗಿಲ್ಲ.

ಸದ್ಯಕ್ಕೆ ಬರಿಗೈಯಲ್ಲಿರುವ ಅಫ್ಘಾನ್ ಸೈನಿಕರನ್ನು ರಷ್ಯಾ ಬಾಡಿಗೆ ಸೈನಿಕರ ಹಾಗೆ ಬಳಸಿಕೊಳ್ಳುತ್ತಿದೆ. ವರದಿಗಳ ಪ್ರಕಾರ ಸುಮಾರು 10,000 ಸೈನಿಕರು ಹೊಟ್ಟೆಪಾಡಿಗಾಗಿ ಪುತಿನ್ ತೋರಿಸಿದ ದಾರಿಯಲ್ಲಿ ನಡೆಯುತ್ತಿದ್ದಾರೆ. (ಏಜೆನ್ಸೀಸ್​)