''ಒಮಿಕ್ರಾನ್'' ವೈರಸ್ ಯಾವ ರೀತಿ ಅಟ್ಯಾಕ್ ಮಾಡುತ್ತದೆ ಗೊತ್ತಾ..? ಇದರ ಲಕ್ಷಣಗಳು ಹಾಗೂ ನಿಯಂತ್ರಣ ಹೇಗೆ..?

''ಒಮಿಕ್ರಾನ್'' ವೈರಸ್ ಯಾವ ರೀತಿ ಅಟ್ಯಾಕ್ ಮಾಡುತ್ತದೆ ಗೊತ್ತಾ..? ಇದರ ಲಕ್ಷಣಗಳು ಹಾಗೂ ನಿಯಂತ್ರಣ ಹೇಗೆ..?

ಬೆಂಗಳೂರು : ಒಮಿಕ್ರಾನ್ ಪ್ರಭೇದದ ಕೊರೊನಾ ವೈರಸ್ ಬಗ್ಗೆ ಇಡೀ ಜಗತ್ತಿನಲ್ಲಿ ಆತಂಕ, ಭಯ ಮನೆ ಮಾಡಿದೆ. ದಿನ ಕಳೆದಂತೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಒಮಿಕ್ರಾನ್ ಪ್ರಭೇದದ ವೈರಸ್ ಹರಡಿದೆ. ಆದರೆ, ಹೊಸ ಒಮಿಕ್ರಾನ್ ಪ್ರಭೇದದ ಬಗ್ಗೆ ಇನ್ನೂ ವಿಶ್ವ ಆರೋಗ್ಯ ಸಂಸ್ಥೆಗೂ ಸರಿಯಾದ ಸ್ಪಷ್ಟತೆ ಇಲ್ಲ.

ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

ಇದರ ಬಗ್ಗೆ ಸರಿಯಾದ ಅಧ್ಯಯನ, ಸಂಶೋಧನೆ ನಡೆಯಲು ಇನ್ನೂ ಕೆಲ ದಿನ, ವಾರಗಳ ಸಮಯ ಬೇಕು. ಇದರ ಮಧ್ಯೆಯೇ ಕೆಲವು ದೇಶಗಳು ದಕ್ಷಿಣ ಆಫ್ರಿಕಾ ಹಾಗೂ ಒಮಿಕ್ರಾನ್ ಬಾಧಿತ ದೇಶಗಳಿಗೆ ವಿಮಾನ ಸಂಚಾರ ಸ್ಥಗಿತಗೊಳಿಸಿವೆ.

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾ ಹೊಸ ರೂಪಾಂತರಿ ಒಮಿಕ್ರಾನ್​ ವೈರಸ್​​ನಿಂದಾಗಿ ಪ್ರಪಂಚದಾದ್ಯಂತ ಆತಂಕ ಶುರುವಾಗಿದೆ. ಈ ಒಮಿಕ್ರಾನ್​ ​​ ಶರವೇಗದಲ್ಲಿ ಹರಡುತ್ತಿದ್ದು, ಈ ವೈರಸ್ ಯಾವ ರೀತಿ ಅಟ್ಯಾಕ್​ ಮಾಡುತ್ತದೆ ಗೊತ್ತಾ..? ಈ ಒಮಿಕ್ರಾನ್​ ದೇಹದ ಮೇಲೆ ಅಟ್ಯಾಕ್​ ಮಾಡಿದ ಮೇಲೆ ಸೋಂಕಿತರಲ್ಲಿ ಮೊದಲು ಕಾಣಿಸಿಕೊಳ್ಳುವ ಲಕ್ಷಣವೇ ವಾಂತಿ. ಸೋಂಕಿತ ಸತತವಾಗಿ ವಾಂತಿ ಮಾಡುತ್ತಲೇ ಇರುತ್ತಾನೆ. ಈ ರೀತಿ ವಾಂತಿ ಮಾಡೋದರಿಂದಾಗಿ ಸೋಂಕಿತ ಸುಸ್ತಾಗುತ್ತಾನೆ. ಆನಂತರ ಪಲ್ಸ್​ ರೇಟ್ ಕ್ರಮೇಣ​ ಕಡಿಮೆಯಾಗುತ್ತಾ ಬರುತ್ತದೆ.

ಪಲ್ಸ್​ ರೇಟ್​ ಕುಸಿಯುತ್ತಿದ್ದಂತೆ ಸೋಂಕಿತ ಇನ್ನಷ್ಟು ನಿತ್ರಾಣ ಆಗುತ್ತಾನೆ. ಆಫ್ರಿಕಾದಲ್ಲಿ 40 ವರ್ಷದೊಳಗಿನವರಲ್ಲಿ ಹೆಚ್ಚಾಗಿ ಒಮಿಕ್ರಾನ್ ಪ್ರಭೇದದ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಬಹಳಷ್ಟು ಮಂದಿಯಲ್ಲಿ ಅಲ್ಪ ಪ್ರಮಾಣದ ಕೊರೊನಾ ಲಕ್ಷಣಗಳು ಮಾತ್ರ ಇವೆ. ಮೈ ಕೈ ನೋವು, ಮೂಳೆ ನೋವು, ಸುಸ್ತುನಂಥ ಲಕ್ಷಣಗಳು ಮಾತ್ರ ಒಮಿಕ್ರಾನ್ ಪ್ರಭೇದದ ಕೊರೊನಾ ಸೋಂಕಿತರಲ್ಲಿವೆ

ಪ್ರಯೋಗಾಲದಲ್ಲಿ ಇದರ ಬಗ್ಗೆ ಪರೀಕ್ಷೆ ಹಾಗೂ ಅಧ್ಯಯನಗಳು ನಡೆಸಿದ ಬಳಿಕವಷ್ಟೇ ಇದಕ್ಕೆ ಲಸಿಕೆ ಪರಿಣಾಮಕಾರಿ ಆಗುತ್ತದೆಯಾ ಮತ್ತು ಇದರ ತೀವ್ರತೆಯು ಎಷ್ಟು ಇರುವುದು ಹೇಳಬಹುದಾಗಿದೆ ಎಂದು ತಜ್ಞರು ತಿಳಿಸಿರುವರು. ಇದರ ಸೋಂಕಿತರ ಬಗ್ಗೆ ಸರಿಯಾದ ಪರಿಶೀಲನೆ ಹಾಗೂ ಅವರನ್ನು ತೀವ್ರ ನಿಗಾದಲ್ಲಿ ಇಟ್ಟುಕೊಂಡು ಪರೀಕ್ಷಿಸಲಾಗುತ್ತಿದೆ. ಕಾಯಿಲೆಯ ತೀವ್ರತೆ ಅಥವಾ ಚಿಕಿತ್ಸೆಗೆ ಇದು ಪರಿಣಾಮ ಬೀರುತ್ತಲಿದ್ದರೆ ಆಗ ಇದರ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಜ್ಞರು ಹೇಳಿರುವರು.

ಲಸಿಕೆಯು ಇಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವುದು. ಆಸ್ಪತ್ರೆಗೆ ದಾಖಲಾಗುವುದು ಮತ್ತು ಸಾವಿನ ಪ್ರಮಾಣದ ಅಪಾಯದಿಂದ ರಕ್ಷಿಸಲು ಲಸಿಕೆಯನ್ನು ಪಡೆಯುವುದು ಅಗತ್ಯ. ಲಸಿಕೆಯನ್ನು ಸಂಪೂರ್ಣವಾಗಿ ತೆಗೆದು ಕೊಂಡಿರುವವರಿಗೆ ಇದರ ಪರಿಣಾಮವು ಕಡಿಮೆ ಇದೆ ಎಂದು ಕೆಲವೊಂದು ಸೋಂಕಿತರಿಂದ ತಿಳಿದುಬಂದಿದೆ.

ಕೊರೊನಾ ಸಾಂಕ್ರಾಮಿಕವು ಇನ್ನು ಸಂಪೂರ್ಣವಾಗಿ ಕೊನೆಗೊಂಡಿಲ್ಲ. ಇದು ಹೊಸ ರೂಪದಲ್ಲಿ ಬರುತ್ತಲೇ ಇದೆ. ಇದರ ಸರಪಳಿಯನ್ನು ಮುರಿಯುವುದು ಅತೀ ಅಗತ್ಯ. ಇದಕ್ಕಾಗಿ ಮಾಸ್ಕ್ ಧರಿಸುವುದು, ಲಸಿಕೆ ಹಾಕಿಸಿಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳು ವುದು ಮುಖ್ಯವಾಗಿದೆ. ಇಂಥಾ ಲಕ್ಷಣಗಳು ಕಂಡು ಬಂದರೆ ಜನರು ಎಚ್ಚರ ವಹಿಸಿಬೇಕಾಗುತ್ತದೆ. ಇನ್ನೂ ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್​​ ನಮ್ಮಲ್ಲಿ ಇನ್ನೂ ಒಮಿಕ್ರಾನ್​​ ವೈರಸ್​ ಕಾಣಿಸಿಕೊಂಡಿಲ್ಲ ಎಂದು ಮಾಹಿತಿ ನೀಡಿದ್ದಾರೆ.