ಬೀಜ ನಿಗಮದ ನೇಮಕದಲ್ಲಿ ಅಕ್ರಮ: ಸಿಎಜಿ ತನಿಖೆಗೆ ಹೈಕೋರ್ಟ್ ಆದೇಶ

ಬೀಜ ನಿಗಮದ ನೇಮಕದಲ್ಲಿ ಅಕ್ರಮ: ಸಿಎಜಿ ತನಿಖೆಗೆ ಹೈಕೋರ್ಟ್ ಆದೇಶ

ಬೆಂಗಳೂರು ; ರಾಜ್ಯ ಸರ್ಕಾರದ ಅಧೀನದಲ್ಲಿರುವ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದಲ್ಲಿ ನಡೆದಿರುವ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಹೈಕೋರ್ಟ್, ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಗೆ ನಿರ್ದೇಶನ ನೀಡಿದೆ

2007ರಿಂದ 2015ರ ನಡುವೆ ಗುತ್ತಿಗೆ ಆಧಾರದ ಮೇಲೆ ನಿಗಮದಲ್ಲಿ ಕೆಲಸ ಮಾಡಿರುವ ಸಿ.ಸುಜಾತಾ ಸಲ್ಲಿಸಿದ್ದ ಒಂದು ಅರ್ಜಿ ಹಾಗೂ ನಿಗಮ ಸಲ್ಲಿಸಿದ್ದ ಇನ್ನೊಂದು ಅರ್ಜಿ ಸೇರಿ ಎರಡು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.ಒಪ್ಪಂದದ ಮೇಲಿನ ಉದ್ಯೋಗದ ವಿಧಾನವು ನಿಜವಾದ ಮತ್ತು ಪ್ರಾಮಾಣಿಕ ವ್ಯವಹಾರವೇ ಅಥವಾ ನಿಗಮವು ಅಳವಡಿಸಿಕೊಂಡ ಕಾಟಾಚಾರದ ವಿಧಾನವೇ ಎಂಬುದನ್ನು ಸಹ ಸಿಎಜಿ ಪರಿಶೀಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.ನಿಗಮವು ಅಳವಡಿಸಿಕೊಂಡ ವಿಧಾನಗಳು ಭಾರತದ ಸಂವಿಧಾನದ ಪೀಠಿಕೆಯಲ್ಲಿ ಪ್ರತಿಪಾದಿಸಲಾದ ಕಲ್ಯಾಣ ರಾಜ್ಯದ ತತ್ವಗಳಿಗೆ ವಿರುದ್ಧವಾಗಿದೆಯೇ ಎಂದು ಕಂಡುಹಿಡಿಯಲು ಸಿಎಜಿಯನ್ನು ಸೂಚಿಸಿರುವ ನ್ಯಾಯಾಲಯವು 2023ರ ಅಕ್ಟೋಬರ್ 15 ರೊಳಗೆ ವರದಿ ನೀಡುವಂತೆ ಸಿಎಜಿ ನಿರ್ದೇಶನ ನೀಡಿದೆ. ಆಘಾತಕಾರಿ: ಅವರು2007ರಿಂದ 2015ರ ನಡುವೆ ನಿರಂತರ ಆಧಾರದ ಮೇಲೆ ನಾಲ್ಕು ವಿಭಿನ್ನ ಗುತ್ತಿಗೆ ನೌಕರರ ಸೇವೆಯನ್ನು ಒದಗಿಸುವ ಸಂಸ್ಥೆಗಳ ಅಡಿಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ನೇಮಕಗೊಂಡಿರುವುದನ್ನು ಗಮನಿಸಿದ ನಂತರ ಹೈಕೋರ್ಟ್ ಆಘಾತ ವ್ಯಕ್ತಪಡಿಸಿದೆ.