ನೇಮಕಾತಿ ಹಗರಣ : ಬಂಧಿತರ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲು

ನೇಮಕಾತಿ ಹಗರಣ : ಬಂಧಿತರ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲು

ಬೆಂಗಳೂರು : 545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಹಗರಣ ಸಂಬಂಧ ಬಂಧಿತರಾದವರ ಮೇಲೆ ಸಿಐಡಿ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲು ಮಾಡಲಾಗಿದೆ

ಪಿಎಸ್ ಐ ನೇಮಕಾತಿ ಪ್ರಕರಣವನ್ನು ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದು, ಪಿಎಸ್​ಐ ನೇಮಕಾತಿ ಹಗರಣದ ಕೇಸ್​ನಲ್ಲಿ ಪಿ.ಸಿ. ಆಕ್ಟ್(ಪ್ರಿವೆನ್ಷನ್ ಆಫ್ ಕರಪ್ಷನ್ ಆಕ್ಟ್. ಭ್ರಷ್ಟಾಚಾರ ತಡೆ ಕಾಯ್ದೆ) ಅಳವಡಿಸಲಾಗಿದೆ.

ಪಿಎಸ್​ಐ ನೇಮಕಾತಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವುದು ದೃಡಪಟ್ಟಿದೆ. ಪಿಎಸ್‌ಐ ನೇಮಕಾತಿಗಾಗಿಯೇ ಪಡೆದಿದ್ದ ಸುಮಾರು 1.5 ಕೋಟಿಗೂ ಹೆಚ್ಚಿನ ಹಣ ಪತ್ತೆಯಾಗಿದೆ. ಹೀಗಾಗಿ ಲಂಚ ನೀಡಿದವರು ಹಾಗೂ ಲಂಚ ಪಡೆದವರ ವಿರುದ್ಧ ಹೊಸ ಸೆಕ್ಷನ್ ಅಡಿಯಲ್ಲಿ ಸಹ ತನಿಖೆ ನಡೆಸಲು ಸಿಐಡಿ ಪೊಲೀಸರು ಮುಂದಾಗಿದ್ದಾರೆ.