ಗುಜರಾತಿಗಳನ್ನು ನಿಂದಿಸುವವರ ವಿರುದ್ದ ಒಂದಾಗಿ : ಪ್ರಧಾನಿ ಮೋದಿ
ನವದೆಹಲಿ : ಗುಜರಾತ್ ನಾಗರಿಕರನ್ನು ನಿರಂತರವಾಗಿ ಅವಮಾನಿಸುವವರ ವಿರುದ್ಧ ರಾಜ್ಯದ ಜನರು ಒಂದಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಒತ್ತಾಯಿಸಿ ವಿಪಕ್ಷಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.
ಗುಜರಾತ್ನ ಜುನಾಗಢ್ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿ, “ಗುಜರಾತ್ ಮತ್ತು ಅದರ ನಾಗರಿಕರನ್ನು ನಿಂದಿಸುವುದರೊಂದಿಗೆ ದಿನವನ್ನು ಪ್ರಾರಂಭಿಸುವವರ ಮತ್ತು ಕೊನೆಗೊಳಿಸುವವರ ವಿರುದ್ಧ ನಮ್ಮ ಶಕ್ತಿಯನ್ನು ಪ್ರದರ್ಶಿಸುವ ಸಮಯ ಬಂದಿದೆ” ಎಂದು ಹೇಳಿದರು.
ದೀಪಾವಳಿ ಮತ್ತು ಧಂತೇರಸ್ಗಳು ಮುಂಚಿತವಾಗಿಯೇ ಬಂದಿವೆ ಮತ್ತು ಜುನಾಗಢದ ಜನರಿಗೆ ಹೊಸ ವರ್ಷಾಚರಣೆಯ ಸಿದ್ಧತೆಗಳು ಈಗಾಗಲೇ ನಡೆಯುತ್ತಿವೆ ಎಂದು ಹೇಳಿದರು.
ಜನರ ಆಶೀರ್ವಾದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಹಿಂದಿನ ಕಾಲದಲ್ಲಿ ರಾಜ್ಯದ ಬಜೆಟ್ಗಿಂತ ಹೆಚ್ಚಿನ ಮೌಲ್ಯದ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿ ಶಂಕುಸ್ಥಾಪನೆ ನೆರವೇರಿಸಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು. ಇದಕ್ಕೆಲ್ಲ ಗುಜರಾತ್ ಜನತೆಯ ಆಶೀರ್ವಾದವೇ ಕಾರಣ ಎಂದರು.