BENGALURU ನಂದಿ ಗಿರಿಧಾಮ್ ದಲ್ಲಿ ಕಿಡಿಗೇಡಿಗಳಿಂದ ಸಾರ್ವಜನಿಕವಾಗಿ ಹುಕ್ಕಾ ಮೋಜು ಮಸ್ತಿ | Huka | Bangaluru | Nandibetta |
ವೀಕೆಂಡ ಬಂತು ಅಂದ್ರೆ ಬೆಂಗಳೂರಿಗರ ಅಚ್ಚು ಮೆಚ್ಚಿನ ತಾಣ ನಂದಿಬೆಟ್ಟ. ಆದರೆ ಅವರಿಗೆಲ್ಲ ಈ ಭಾರಿ ನಿರಾಸೆ ಕಾದಿತ್ತು. ಕೊರೋನ್ ಸೋಂಕು 3ನೇ ಅಲೆ ವೇಗವಾಗಿ ಹರಡುತ್ತಿರುವುದರಿಂದ ಸ್ಥಳೀಯ ಆಡಳಿತ ಮಂಡಳಿ ಪ್ರವೇಶ ನಿಷೇಧಿಸಿತ್ತು. ಕುಟುಂಬದೊಂದಿಗೆ ವೀಕೆಂಡ ಕಳೆಯಲು ಬಂದಿದ್ದ ನೂರಾರು ಜನರಿಗೆ ನಿರಾಸೆಯಾಯಿತು. ಇದು ಒಂದೆಡೆಯಾದರೆ ಇನ್ನೊಂದೆಡೆ ಕೆಲವು ಕಿಡಿಗೇಡಿಗಳು ರಾಜಾರೋಷವಾಗಿ ಹಚ್ಚು ಹಸಿರಾದ ನಂದಿ ತಪ್ಪಲಲ್ಲಿ ಹುಕ್ಕಾ ಸೇದಿ ಮೋಜು ಮಾಡುತ್ತಿದ್ದರು. ಈ ಘಟನೆ ಪ್ರವಾಸಿಗರಿಗೆ ಇರಿಸು ಮುರಿಸು ಮಾಡಿದೆ.ಇಷ್ಟೆಲ್ಲಾ ಆದರೂ ಇವರನ್ನು ತಡೆಯಲು ಸ್ಥಳೀಯ ಅಧಿಕಾರಿಗಳು ಮಾತ್ರ ಮುಂದೆ ಬರಲಿಲ್ಲ.