ಸಾವಿನಲ್ಲೂ ಸಾರ್ಥಕತೆ ಮೆರೆದ ಅಭಿನಯ ಶಾರದೆ ಜಯಂತಿ : ಎರಡು ಕಣ್ಣುಗಳ ದಾನ

ಬೆಂಗಳೂರು: ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಹೆಮ್ಮೆಯ ಹಿರಿಯ ನಟಿ ಜಯಂತಿ ಅವರು ಇಂದು ವಿಧಿವಶರಾಗಿದ್ದಾರೆ. ಇನ್ನೂ ಅಭಿನಯ ಶಾರದೆ ಎರಡು ಕಣ್ಣುಗಳನ್ನು (Jayanthi donates two eyes) ನಾರಾಯಣ ನೇತ್ರಾಲಯದ ಡಾ ರಾಜ್ ಕುಮಾರ್ ಐ ಬ್ಯಾಂಕ್ ಗೆ (Eye )Bank ನೀಡಲಾಗಿದೆ. ಅವರ ಕಣ್ಣುಗಳನ್ನು ಬಾಲಕನೊಬ್ಬನಿಗೆ ನೀಡಲಾಗಿದೆ ಎನ್ನಲಾಗಿದೆ. ಈ ಮೂಲಕ ಸಾವಿನಲ್ಲೂ ಕೂಡ ಅವರು ಮಾನವೀಯತೆಯನ್ನು ಮೆರೆದು ಇತರರಿಗೆ ಮಾದರಿಯಾಗಿದ್ದಾರೆ. ಈ ನಡುವೆ ಅವರ ಅಂತ್ಯಕ್ರಿಯೆ ಬನಶಂಕರಿ ಚಿತಗಾರದಲ್ಲಿ ನೇರವೇರಿಸಲಾಯಿತು.
ಜಯಂತಿ ಮೂಲತಃ ಬಳ್ಳಾರಿಯವರು. 1945ರಲ್ಲಿ ಜನಿಸಿದ ಅವರ ಮೂಲ ಹೆಸರು ಕಮಲಾ ಕುಮಾರಿ. ತಂದೆ ಬಾಲಸುಬ್ರಹ್ಮಣ್ಯಂ ತಾಯಿ ಸಂತಾನಲಕ್ಷ್ಮೀ ಜಯಂತಿಗೆ ಇಬ್ಬರು ಕಿರಿಯ ಸಹೋದರರಿದ್ದಾರೆ ಒಬ್ಬ ಪುತ್ರರಿದ್ದಾರೆ.