ಕನ್ನಡಿಗರಲ್ಲಿ ಮೋದಿಗೆ ಯಾಕಿಷ್ಟು ದ್ವೇಷ: ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವಿಟರ್ನಲ್ಲಿ ಸರಣಿ ಪ್ರಶ್ನೆಗಳನ್ನು ಕೇಳಿದ್ದು, “ಆನ್ಸರ್ ಮಾಡಿ ಮೋದಿ’ (ಉತ್ತರ ಹೇಳಿ ಮೋದಿ) ಎಂದು ಆಗ್ರಹಿಸಿದ್ದಾರೆ.
ಉತ್ತರ ಹೇಳಿ ಮೋದಿ ಎಂಬ ಹ್ಯಾಶ್ಟ್ಯಾಗ್ ಮೂಲಕ ಸರಣಿ ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೆಣಕಿರುವ ಸಿದ್ದರಾಮಯ್ಯ, ಕೇಂದ್ರದ ಆಯೋಗಗಳು ನಡೆಸುವ ಪ್ರವೇಶ ಪರೀಕ್ಷೆಯಿಂದ ಕನ್ನಡವನ್ನು ಕಿಕ್ ಔಟ್ ಮಾಡಿ ಕನ್ನಡಿಗರ ಪಾಲಿನ ಉದ್ಯೋಗ ಕಿತ್ತುಕೊಳ್ಳಲಾಗಿದೆ.
ಜತೆಗೆ ಸಚಿವರ ಲಂಚ ಪ್ರಕರಣ, ಶೇ. 40 ಕಮಿಷನ್ ಆರೋಪ, ತುಮಕೂರು-ದಾವಣಗೆರೆ, ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆ, ಎಸ್ಸಿ, ಎಸ್ಟಿ ಸಮುದಾಯದ ಮೀಸಲು ಹೆಚ್ಚಳ, ರಾಜ್ಯದ ಸಾಲ ಪ್ರಮಾಣ ಹೆಚ್ಚಳ ಮುಂತಾದ ಹಲವಾರು ವಿಷಯಗಳಲ್ಲೂ ಪ್ರಧಾನಿಯನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.