ಎಸ್​​ಸಿ/ಎಸ್​​ಟಿ ಸಮುದಾಯಕ್ಕೆ ನ್ಯಾಯ ಕೊಡಬೇಕೆಂದು ನಿರ್ಧರಿಸಿ ಮೀಸಲಾತಿ ಹೆಚ್ಚಳ ಮಾಡಲಾಗಿದೆ; ಸಿ.ಟಿ.ರವಿ

ಎಸ್​​ಸಿ/ಎಸ್​​ಟಿ ಸಮುದಾಯಕ್ಕೆ ನ್ಯಾಯ ಕೊಡಬೇಕೆಂದು ನಿರ್ಧರಿಸಿ ಮೀಸಲಾತಿ ಹೆಚ್ಚಳ ಮಾಡಲಾಗಿದೆ; ಸಿ.ಟಿ.ರವಿ

ಬೆಂಗಳೂರು: ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮೀಸಲಾತಿ ಎಂಬುವುದು ಬಹಳ ಸೂಕ್ಷ್ಮವಾದ ವಿಚಾರ. ಸಮಾಜದಲ್ಲಿರುವ ದುರ್ಬಲ ವರ್ಗಕ್ಕೆ ಮೀಸಲಾತಿ ಸೌಲಭ್ಯ ಸಿಗಬೇಕು ಎಂದು ಹೇಳಿದರು.

ಮೀಸಲಾತಿ ಕಾಲ ಕಾಲಕ್ಕೆ ಮಾರ್ಪಾಢು ಆಗುತ್ತಿರಬೇಕು. ಬಿಜೆಪಿ ಎಲ್ಲಾ ಪಂಗಡದವರನ್ನು ಪ್ರತಿನಿಧಿಸುವ ಪಕ್ಷ. ಮೀಸಲಾತಿ ವಿಚಾರವಾಗಿ ನ್ಯಾಯಯುತ ಪರಿಶೀಲನೆ ಮಾಡಲಾಗುತ್ತದೆ. ಯಾವ ವರ್ಗಕ್ಕೆ ನ್ಯಾಯ ಸಿಕ್ಕಿಲ್ಲ ಎನ್ನುವುದನ್ನು ಪರಿಶೀಲಿಸಿ, ಅವರಿಗೆ ಮೀಸಲಾತಿ ನೀಡುವ ಕೆಲಸ ಮಾಡಲಾಗುತ್ತದೆ.

ಮೀಸಲಾತಿ ಸಣ್ಣ ಹಾಗೂ ಬಡ ಸಮುದಾಯಗಳಿಗೆ ಲಭಿಸಬೇಕು. ಎಸ್​​ಸಿ, ಎಸ್​​ಟಿ ಸಮುದಾಯಕ್ಕೆ ನ್ಯಾಯ ಕೊಡಬೇಕೆಂದು ನಿರ್ಧರಿಸಿ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಯಾವುದೇ ಸಮುದಾಯಕ್ಕೆ ಅನ್ಯಾಯ ಆಗದಂತೆ ಹಾಗೂ ನಮ್ಮ ಸಮುದಾಯಕ್ಕೆ ನ್ಯಾಯ ಕೊಡಿಸೋದೆ ನಮ್ಮ ಹೊಣೆ ಎಂದು ಹೇಳಿದರು.